ಕಮಲನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮನೋಜಕುಮಾರ ಹಿರೇಮಠ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮಹಾದೇವ ಬಿರಾದಾರ ಆಯ್ಕೆಯಾದರು. ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಉಪಾಧ್ಯಕ್ಷ ಪ್ರಥ್ವಿ.ಎಸ್, ಸ್ವಾಮಿದಾಸ ನಾಗುರೆ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಶ್ರೀಕಾಂತ ಪಾಟೀಲ, ಮತ್ತು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಸಂತೋಷ ಚಟ್ಟಿ, ರಾಜಕುಮಾರ ಸಗರ ನೇತೃತ್ವದ ತಂಡ ಕಮಲನಗರ ಟಕ ಅಧ್ಯಕ್ಷ ಮನೋಜ ಹಿರೇಮಠ ಮತ್ತು ಪ್ರಧಾನ ಕಾರ್ಯದರ್ಶಿ ಮಹಾದೇವ ಬಿರಾದರ ಹೆಸರು ಘೋಷಿಸಿ ಸನ್ಮಾನಿಸಿದರು. ಡಾ.ಎಸ್.ಎಸ್.ಮೈನಾಳೆ, ಬಿ.ಬಿ.ಹೆಡೆ, ಪ್ರಶಾಂತ ಮಠಪತಿ, ಸಿ.ಎಂ. ಗಳಗೆ, ಬಾಲಾಜಿ ಫಿರಂಗೆ, ರಾಜಶೇಖರ ಅಜ್ಜ, ಸವಿತಾ ರಾಜಶೇಖರ ಅಜ್ಜ, ನಿತಿನ ಶಿವಣಕರ್, ಪರಮೇಶ ರಾಂಪುರೆ, ಸಂಗೇಮೇಶ ಮುರ್ಕೆ, ಮಹಾದು ರ್ಬಗೆ, ಸಂಜೀವಕುಮಾರ ನವಾಡೆ, ಮೊಯಿನ್ ಅತನೂರೆ, ಶಿವಾನಂದ ಬಿಚಕುಂದೆ, ಇಲಾಹಿ ಬಾಗವಾನ, ಪ್ರವಿಣ ಹೊಂಡಾಳೆ, ಸಂತೋಷ ದಿಂಡೆ ಹಾಗೂ ಸಂತೋಷ ಕಳಗಾಪುರಕರ್, ಚೋಟೋ ಇದ್ದರು.