ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪಂ.ವಿ.ಎಂ. ನಾಗರಾಜ್ ನಿಧನ

ಮಹಾಮಹೋಪಾಧ್ಯಾಯರ ನಿಧನಕ್ಕೆ ಗಣ್ಯರ ಕಂಬನಿ
Hindustani music scholar Pandit V. M. Nagaraja passes away
ಹಿಂದೂಸ್ತಾನಿ ಸಂಗೀತ ವಿದ್ವಾಂಸ ಪಂಡಿತ್ ವಿ.ಎಂ.ನಾಗರಾಜ ನಿಧನ
Published on: 

ಬೆಂಗಳೂರು : ಸಂಗೀತ ಕ್ಷೇತ್ರದ ಹಿರಿಯ ವಿದ್ವಾಂಸ, ಮಹಾಮಹೋಪಾಧ್ಯಾಯ ಪಂಡಿತ ಡಾ. ವಿ.ಎಂ. ನಾಗರಾಜ್ (84) ಸೋಮವಾರ ನಿಧನರಾಗಿದ್ದಾರೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪಂಡಿತ ವಿ.ಎಂ. ನಾಗರಾಜ್, ಗಾಯನ ಕಲಾವಿದರಾಗಿ ಹಾಗೂ ಸಂಗೀತ ಗುರುಗಳಾಗಿ ಅಪಾರ ಕೊಡುಗೆ ನೀಡಿದ್ದರು. ಹಲವು ದಶಕಗಳ ಕಾಲ ಸಂಗೀತ ಸಾಧನೆ, ಬೋಧನೆ ಮತ್ತು ಶಿಷ್ಯರನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿದ್ದರು. ಸಂಗೀತ ಕ್ಷೇತ್ರದ ಮಹತ್ವದ ಗೌರವವಾದ ‘ಮಹಾಮಹೋಪಾಧ್ಯಾಯ’ ಬಿರುದಿನಿಂದ ಪುರಸ್ಕೃತರಾಗಿದ್ದ ಅವರು, ಹಿಂದೂಸ್ತಾನಿ ಸಂಗೀತ ಪರಂಪರೆಯ ಬೆಳವಣಿಗೆಗೆ ಶ್ರಮಿಸಿದ್ದರು.

ನಾಲ್ಕು ತಿಂಗಳ ಹಿಂದಷ್ಟೇ ಪತ್ನಿಯನ್ನು ಕಳೆದುಕೊಂಡಿದ್ದ ನಾಗರಾಜ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಶಿಷ್ಯರು, ಬಂಧು-ಮಿತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಕೆಂಗೇರಿ ಚಿತಾಗಾರದಲ್ಲಿ ನೆರವೇರಿತು. ಸಂಗೀತ ಕ್ಷೇತ್ರದ ಹಲವು ಗಣ್ಯರು, ಕಲಾವಿದರು ಹಾಗೂ ಶಿಷ್ಯವೃಂದದವರು ಸಂತಾಪ ಸೂಚಿಸಿದ್ದಾರೆ.