ಕಸದ ತಿಪ್ಪೆಯಾದ ಹಿಂದೂ ರುದ್ರಭೂಮಿ

ಇಳಕಲ್ಲ ನಗರದ ಹಿಂದೂ ರುದ್ರಭೂಮಿಯಲ್ಲಿ ತ್ಯಾಜ್ಯವನ್ನು ತಂದು ಎಸೆದಿರುವುದರಿಂದ ಕಸದ ಗುಡ್ಡೆಯಾಗಿ ಮಾರ್ಪಟ್ಟಿರುವುದು.
ಇಳಕಲ್ಲ ನಗರದ ಹಿಂದೂ ರುದ್ರಭೂಮಿಯಲ್ಲಿ ತ್ಯಾಜ್ಯವನ್ನು ತಂದು ಎಸೆದಿರುವುದರಿಂದ ಕಸದ ಗುಡ್ಡೆಯಾಗಿ ಮಾರ್ಪಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತೆಗೆ ಸಾರ್ವಜನಿಕರ ಆಗ್ರಹ

ಇಳಕಲ್ಲ: ನಗರದ ಹಿಂದೂ ರುದ್ರಭೂಮಿ ಆವರಣ ದಿನದಿಂದ ದಿನಕ್ಕೆ ಕಸದ ತಿಪ್ಪೆಯಾಗಿ ಪರಿವರ್ತನೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಸ್ಮಶಾನದ ಅಭಿವೃದ್ಧಿಗಾಗಿ ಲಕ್ಷಾಂತರ ರೂ. ಅನುದಾನ ವ್ಯಯಿಸಿ ರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಅದೇ ರಸ್ತೆ ಮೇಲೆ ನಗರಸಭೆ ಸಿಬ್ಬಂದಿ ಮತ್ತು ಸಾರ್ವಜನಿಕರು ನಗರದ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಹೀಗೆ ಮುಂದುವರಿದರೆ ರಸ್ತೆಯೇ ಸಂಪೂರ್ಣ ಬಂದ್ ಆಗುವ ಹಂತಕ್ಕೆ ತಲುಪಿದೆ.

ಹಾಳಾದ ಮಣ್ಣು, ಕಲ್ಲು-ಕಾಂಕ್ರೇಟ್ ಅವಶೇಷಗಳು ಹಾಗೂ ಗೃಹಬಳಕೆ ಕಸ ತಂದು ಇಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಈಗ ತಿಪ್ಪೆಯಂತಾಗಿದೆ. ನಗರಸಭೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸ್ಮಶಾನ ಆವರಣವನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net