ರಸ್ತೆ ಅಗಲೀಕರಣಕ್ಕಾಗಿ ಹೆದ್ದಾರಿ ಬಂದ್​ ಇಂದು

ಶಾಂತಪುರ ಕ್ರಾಸ್​ ಬಳಿ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಭಾನುವಾರ ಹಮ್ಮಿಕೊಳ್ಳುವ ರಾಷ್ಟ್ರೀಯ ಹೆದ್ದಾರಿ ಬಂದ್​ ಹಾಗೂ ರಸ್ತಾರೋಖೋ ಚಳುವಳಿಗೆ ಅನುಮತಿ ನೀಡುವಂತೆ ಸಾಮೂಹಿಕ ಸಂಟನೆಗಳ ಮುಖಂಡರು ಶನಿವಾರ ತಹಸೀಲ್ದಾರ್​ ಹುಸೇನ್​ಸಾಬ್​ ಸರ್ಕಾವಸ್​ ಅವರಿಗೆ ಮನವಿಪತ್ರ ಸಲ್ಲಿಸಿದರು. ಗಂಗಾಧರ ನಾಯಕ, ರತ್ನರಾಜ ಶಾಲಿಮನಿ, ಅಯ್ಯಣ್ಣ ಹಾಲಭಾವಿ, ಸಂಜೀವನಾಯಕ, ಮಲ್ಲಿಕಾರ್ಜುನ ಬೇವಿನಹಳ್ಳಿ, ದೇವಿಂದ್ರಪ್ಪ ಮೇಟಿ, ಶರಣು ಮಕಾಶಿ, ದೇವರಾಜ ಗಿರಣಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಂತಪುರ ಕ್ರಾಸ್​ ಬಳಿ ಸಾಮೂಹಿಕ ಸಂಟನೆಗಳಿಂದ ಪ್ರತಿಭಟನೆಗಾಗಿ ತಹಸೀಲ್ದಾರ್​ಗೆ ಮನವಿ
ಕಕ್ಕೇರಾ: ರಾಷ್ಟ್ರೀಯ ಹೆದ್ದಾರಿ 150ರಲ್ಲಿ ರಸ್ತೆ ಕಿರಿದಾದ ಕಾರಣ ನಿತ್ಯ ಅಪಘಾತಗಳಾಗಿ ಸಾವು&ನೋವುಗಳು ಸಂಭವಿಸುತ್ತಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಈ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಭಾನುವಾರ ಬೆಳಗ್ಗೆ 9ರಿಂದ ಸಾಮೂಹಿಕ ಸಂಟನೆಗಳ ಕಾರ್ಯಕರ್ತರು ಶಾಂತಪುರ ಕ್ರಾಸ್​ ಬಳಿ ರಸ್ತಾರೋಖೋ ಚಳವಟಿ ಹಮ್ಮಿಕೊಂಡಿದೆ.
ಈ ಕುರಿತು ಶನಿವಾರ ಸುರಪುರ ತಹಸೀಲ್ದಾರ ಹಾಗೂ ಆರಕ್ಷಕ ನಿರೀಕ್ಷಕರಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದು, ಈ ಪ್ರತಿಭಟನೆಯಲ್ಲಿ ತಿಂಥಣಿ, ಬಂಡೊಳ್ಳಿ, ಶಾಂತಪುರ, ಹುಣಸಿಹೊಳೆ, ಲಿಂಗದಳ್ಳಿ ಸೇರಿ ಇತರೆ ಗ್ರಾಮಗಳ ಮುಖಂಡರು ಭಾಗವಹಿಸಲಿದ್ದಾರೆ.
ಶುಕ್ರವಾರ ಅಮಾವಾಸ್ಯೆ ದಿನದಂದು ಶಾಂತಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್​ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ 9ಜನ ಅಮಾಯಕರು ಸಜೀವ ದಹನವಾಗಿದ್ದು, ಇಡೀ ಮಾನವ ಕುಲ ಕಲುಕುವಂತಾಗಿದೆ. ಇದೇ ವರ್ಷದ ಜನೇವರಿಯಲ್ಲಿ ತಿಂಥಣಿ ಕಮಾನ್​ ಹತ್ತಿರ 5 ಜನರು ಇದೇ ರಸ್ತೆ ಮಾರ್ಗದ ಅಪಘಾತದಲ್ಲಿ ಸಾವನ್ನಪ್ಪಿದ್ದಲ್ಲದೇ ಇದೇ ತಿಂಗಳ ವಾರದ ಹಿಂದೆ ಓರ್ವ ವ್ಯಕ್ತಿ ಈ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಇದೇ ರೀತಿಯಾಗಿ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ನೂರಾರು ಪ್ರಾಣ ಹಾನಿಯಾಗಿವೆ. ಇದಕ್ಕೆಲ್ಲ ಮುಖ್ಯ ಕಾರಣ ಎಂದರೆ ಕಿರಿದಾದ ಹಾಗೂ ಇಕ್ಕಟ್ಟಾದ ರಸ್ತೆ. ಹೀಗಾಗಿ ಜಿಲ್ಲಾಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಭರವಸೆ ನೀಡುವರೆಗೂ ನಮ್ಮ ಹೋರಾಟ ಕೈ ಬಿಡುವುದಿಲ್ಲ ಎಂದು ಚಳುವಳಿಯ ಹೋರಾಟಗಾರರಾದ ಗಂಗಾಧರನಾಯಕ ತಿಂಥಣಿ, ಅಯ್ಯಣ್ಣ ಹಾಲಭಾವಿ, ರತ್ನರಾಜ ಶಾಲಿಮನಿ, ದೇವಿಂದ್ರಪ್ಪ ಮೇಟಿಗೌಡ್ರು, ಮಲ್ಲಿಕಾರ್ಜುನ ಬೇವಿನಾಳ, ಶರಣು ಮಕಾಶಿ ಲಿಂಗದಳ್ಳಿ, ಸಂಜೀವನಾಯಕ ಸಚಿನಕುಮಾರ ನಾಯಕ, ದೇವರಾಜ ಗಿರಣಿ, ಬೈರಣ್ಣ ಅಂಬಿಗೇರ, ಸೋಪಣ್ಣ ಶಾಂತಪುರ, ಪರಮಣ್ಣ ಹಾಲಭಾವಿ, ಗುರುಬಸವ ಬಂಡೊಳ್ಳಿ, ಎಪಿಎಂಸಿ ಮಾಜಿ ಸದಸ್ಯ ಪರಮಣ್ಣ ಹಾಲಭಾವಿ, ಮರಿಲಿಂಗಪ್ಪ ಹುಣಸಿಹೊಳೆ ಸೇರಿ ಅನೇಕರು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net