ಔರಾದ್ನ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಾಗಾರವನ್ನು ಒಕ್ಕೂಟ ಸದಸ್ಯೆ ದುರ್ಗದೇವಿ ಉದ್ಘಾಟಿಸಿದರು. ರೇಣುಕಾ, ಬಸವರಾಜ ಪೂಜಾರಿ, ಸಪ್ನಾ ಇತರರಿದ್ದರು.
ಕೃಷಿಯ ಜತೆಗೆ ಹೈನುಗಾರಿಕೆ ಅಳವಡಿಸಿಕೊಂಡರೆ ಹೆಚ್ಚಿನ ಆದಾಯ ಪಡೆಯಬಹುದು ಎಂದು ಕೃಷಿ ಅಧಿಕಾರಿ ಬಸವರಾಜ ಪೂಜಾರಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಸ್ಥಳಿಯ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ರೈತರು ಮಣ್ಣು ಪರೀಕ್ಷೆ ಮಾಡಿಸುವುದು ಅತ್ಯಗತ್ಯ. ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ಸೂಕ್ತ ರಸಗೊಬ್ಬರ ಆಯ್ಕೆ ಮಾಡಿಕೊಳ್ಳಬೇಕು. ರಾಸಾಯನಿಕ ಬಳಕೆ ತಗ್ಗಿಸಿ ಸಾವಯವ ಗೊಬ್ಬರಗಳ ಬಳಕೆ ಹೆಚ್ಚು ಮಾಡುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು. ಉತ್ತಮ ಗುಣಮಟ್ಟದ ಬೆಳೆ ಬೆಳೆದು ಆರ್ಥಿಕವಾಗಿ ಲಾಭ ಗಳಿಸಬಹುದು ಎಂದರು.
ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿಪಡಿಸಿ ಮಾರಾಟ ಮಾಡುವ ಅಥವಾ ಸ್ವಾವಲಂಬನೆಗಾಗಿ ಸ್ವಉದ್ಯೋಗ ಕೈಗೊಳ್ಳುವ ಕುರಿತು ರೈತರಿಗೆ ಮಾರ್ಗದರ್ಶನ ಹಾಗೂ ಅನಿರೀಕ್ಷಿತ ನಷ್ಟಗಳಿಂದ ರಕ್ಷಣೆ ಪಡೆಯಲು ಬೆಳೆ ವಿಮೆಯಿಂದ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಒಕ್ಕೂಟ ಪ್ರತಿನಿಧಿ ದುರ್ಗಾದೇವಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಜನ ಜಾಗೃತಿ ಸದಸ್ಯ ಮಲ್ಲಪ್ಪ ಗೌಡ ಮಾತನಾಡಿದರು.
ಸೇವಾ ಪ್ರತಿನಿಧಿ ರೇಣುಕಾ, ಸಪ್ನಾ, ರಾಣಿ, ಸಂಗೀತಾ, ಮಹಾದೇವಿ, ಅಲ್ಕಾ, ಸುರೇಖಾ, ಶಾವುಬಾಯಿ, ಪಾರುಬಾಯಿ, ಸುರೇಖಾ, ಉಮಾ, ಶಾರದಾ ಬಾಯಿ ರೇಖಾ, ಚಿನ್ನಮ್ಮ, ರಾಧಿಕಾ, ಸಂಗೀತಾ ಇತರರಿದ್ದರು.