

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ಜಾರ್ ಗೋಲ್ಡ್ ರೀಟೇಲ್ ಪೆ.ಲಿ. ಕಂಪನಿಯ ಬ್ಯಾಂಕ್ ಖಾತೆಗಳ ವಹಿವಾಟು ರ್ನಿಬಂಧಿಸಿದ್ದ (ಫ್ರೀಜ್) ಪೊಲೀಸರ ನಿರ್ಧಾರವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಖಾತೆಗಳನ್ನು ಡಿಫ್ರೀಜ್ ಮಾಡಿ ವಿಚಾರಣಾ ನ್ಯಾಯಾಲಯವು ಏ. 4ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ℹ️
ನಿಯಮದ ಸ್ಪಷ್ಟನೆ ನೀಡಿದ ಕೋರ್ಟ್
ಕಂಪನಿಯ ವಾದವನ್ನು ನಿರಾಕರಿಸಿರುವ ನ್ಯಾಯಪೀಠ, ಬಿಎನ್ಎಸ್ಎಸ್ನ 106 ಮತ್ತು 107ನೇ ಸೆಕ್ಷನ್ಗಳು ವಿಭಿನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಿದೆ. ಸೆಕ್ಷನ್ 107 ಅನ್ನು ಬಳಸಿ ಅಪರಾಧದ ಹಣವನ್ನು ಜಪ್ತಿ ಮಾಡಬಹುದು. ಆದರೆ, ತನಿಖಾ ಹಂತದಲ್ಲಿ ಖಾತೆ ರ್ನಿಬಂಧಿಸುವುದಕ್ಕೆ ಸೆಕ್ಷನ್ 106 ಅವಕಾಶ ನೀಡುತ್ತದೆ. ಸೆಕ್ಷನ್ 107 ಒಂದನ್ನೇ ಬ್ಯಾಂಕ್ ಖಾತೆಗಳ ಮೇಲಿನ ಕ್ರಮಕ್ಕೆ ಏಕೈಕ ಮಾರ್ಗವೆಂದು ವ್ಯಾಖ್ಯಾನಿಸಿದರೆ, ಅದು ಸೆಕ್ಷನ್ 106ರ ಅಡಿಯಲ್ಲಿ ತನಿಖಾಧಿಕಾರಿಗೆ ನೀಡಿದ ಅಧಿಕಾರವನ್ನೇ ನಿಷ್ಕಿಯಗೊಳಿಸಿದಂತಾಗುತ್ತದೆೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: