ಜಪ್ತಿ ಆದೇಶಕ್ಕೆ ಹೈಕೋರ್ಟ್ ತಡೆ

ಯಾದಗಿರಿ ಜಿ¯್ಲÁ ನ್ಯಾಯಾಲಯ ಜಪ್ತಿ ಮಾಡಿದ್ದ ಪೀಠೋಪಕರಣಗಳನ್ನು ಶುಕ್ರವಾರ ನಗರಸಭೆಗೆ ವಾಪಸ್ ತರಲಾಯಿತು.
ಯಾದಗಿರಿ ಜಿ¯್ಲÁ ನ್ಯಾಯಾಲಯ ಜಪ್ತಿ ಮಾಡಿದ್ದ ಪೀಠೋಪಕರಣಗಳನ್ನು ಶುಕ್ರವಾರ ನಗರಸಭೆಗೆ ವಾಪಸ್ ತರಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ೮ರೊಳಗೆ ರು.೧೦ ಲಕ್ಷ ಠೇವಣಿ ಇಡಲು ನಗರಸಭೆಗೆ ಸೂಚನೆ
  • ೨೦ಕ್ಕೆ ವಿಚಾರಣೆ ಮುಂದೂಡಿಕೆ

ಯಾದಗಿರಿ:

ಭೂಸ್ವಾಽÃನ ಪರಿಹಾರ ಪ್ರಕರಣದಲ್ಲಿ ಸ್ಥಳೀಯ ನಗರಸಭೆ ವಿರುದ್ಧ ಮೊದಲ ಹೆಚ್ಚುವರಿ ಜಿ¯್ಲÁ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಚರಾಸ್ತಿ ಜಪ್ತಿ ಆದೇಶಕ್ಕೆ ಕಲಬುರಗಿ ಹೈಕೋರ್ಟ್ ಪೀಠ ತಡೆ ನೀಡಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಹೇಳಿದರು.

೧೯೮೩-೮೪ರಲ್ಲಿ ಸ್ವಾಽÃನಪಡಿಸಿಕೊಂಡಿದ್ದ ೬,೬೫೬ ಚದರಡಿ ಜಮೀನಿನ ಪರಿಹಾರ ಸಂಬAಧ ಸರಸ್ವತಿಬಾಯಿ ಸಲ್ಲಿಸಿದ್ದ ಜಾರಿ ಅರ್ಜಿ ಮೇರೆಗೆ ಜಿ¯್ಲÁ ನ್ಯಾಯಾಲಯ ನಗರಸಭೆಯ ಕಂಪ್ಯೂಟರ್, ಕುರ್ಚಿ, ಟೇಬಲï, ಏರ್‌ಕೂಲರ್ ಇತರ ಚರಾಸ್ತಿಗಳನ್ನು ಜಪ್ತಿ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಸಿಬ್ಬಂದಿ ಹೈಕೋರ್ಟ್ ಮೊರೆ ಹೋಗಿದ್ದರು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಜಪ್ತಿ ಆದೇಶಕ್ಕೆ ಆ.೨೦ರವರೆಗೆ ತಡೆ ನೀಡಿದ್ದಲ್ಲದೆ ಆ.೮ರೊಳಗೆ ೧೦ ಲಕ್ಷ ರೂ. ಠೇವಣಿ ಇಡುವಂತೆ ನಗರಸಭೆಗೆ ನಿರ್ದೇಶನ ನೀಡಿದೆ. ಇದರಂತೆ ಅವಽಯೊಳಗೆ ೧೦ ಲಕ್ಷ ರೂ. ಠೇವಣಿ ಇಡಲಾಗುವುದು. ಮುಂದೆ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುವುದಾಗಿ ಹೇಳಿದರು.
ಈ ವಿಷಯದಲ್ಲಿ ನಾವು ಸೇರಿ ನಗರಸಭೆ ವಕೀಲರಿಂದಲೂ ತಪ್ಪುಗಳಾಗಿವೆ ಎಂದ ಅವರು, ಇದುವರೆಗೂ ಸಂತ್ರಸ್ತೆಗೆ ೩೧ ಲಕ್ಷ ರೂ. ಪಾವತಿಸಲಾಗಿದೆ. ಶುಕ್ರವಾರ ಸಂಜೆ ಜಿ¯್ಲÁ ನ್ಯಾಯಾಲಯದಿಂದ ಜಪ್ತಿಯಾದ ಪೀಠೋಪಕರಣಗಳನ್ನು ಕಚೇರಿಗೆ ತರಲಾಗಿದ್ದು, ನಾಳೆಯಿಂದ ಎಂದಿನAತೆ ಕೆಲಸ ನಡೆಯಲಿದೆ. ಎಸ್‌ಐಆರ್ ಪ್ರಕ್ರಿಯೆ ನಿಗದಿಯಂತೆ ಮುಗಿಸಲಾಗುವುದು. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗೆ ಬರಬಹುದು ಎಂದು ಅವರು ಮನವಿ ಮಾಡಿದರು.

ಬಾಕಿ ಉಳಿಸಿಕೊಂಡ ತೆರಿಗೆ ಹಣ ತಕ್ಷಣ ಪಾವತಿಸಿ

ನಗರದ ವಸತಿ, ಮಳಿಗೆ, ದೊಡ್ಡ ದೊಡ್ಡ ಕಟ್ಟಡ, ಶಾಲಾ-ಕಾಲೇಜು ಸೇರಿ ವಿವಿಧ ಆಸ್ತಿಗಳಿಂದ ನಗರಸಭೆಗೆ ೧೦-೧೫ ಕೋಟಿ ರೂ. ತೆರಿಗೆ ಬಾಕಿ ಇದೆ. ನಗರಸಭೆ ನಿರ್ವಹಣೆಗೆ ಆರ್ಥಿಕ ತೊಂದರೆಯಾಗಿದ್ದರಿAದ ತೆರಿಗೆ ಬಾಕಿ ಉಳಿಸಿಕೊಂಡವರು ಕೂಡಲೇ ಕಟ್ಟಬೇಕು. ಇಲ್ಲವಾದರೆ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಉಮೇಶ ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.
"

ಮಹಾರಾಷ್ಟç ಮಳೆಯಿಂದಾಗಿ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಈ ವೇಳೆ ಮೀನುಗಾರರು, ಸಾರ್ವಜನಿಕರು ಯಾವ ಕಾರಣಕ್ಕೂ ನಗರದ ಸಮೀಪದ ಭೀಮಾ ನದಿಗೆ ತೆರಳಬಾರದು. ಮಳೆ ಆರಂಭವಾಗಿದ್ದರಿAದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ನೀರು ಕಾಯಿಸಿ, ಸೋಸಿ ಕುಡಿಯಬೇಕು.| ಉಮೇಶ ಚವ್ಹಾಣ್ನಗರಸಭೆ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net