ಮಾಧ್ಯಮಗಳು ನ್ಯಾಯಾಧೀಶರಾಗುವುದು ಬೇಡ| ದರ್ಶನ್ ಪ್ರಕರಣದಲ್ಲಿ High court ಆದೇಶ

Darshan
Darshan
Published on
ಬೆಂಗಳೂರು: ಮಾಧ್ಯಮಗಳು ನ್ಯಾಯಾಧೀಶರಂತೆ ವರ್ತಿಸಿ ತೀರ್ಪು ನೀಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್​, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 
.
ನ್ಯಾಯಾಲಯ ವಿಧಿಸಿರುವ ರ್ನಿಬಂಧವನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್​ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್​ ಏ. 30ರಂದು ಭಾಗಶಃ ಪುರಸ್ಕರಿಸಿತ್ತು. ಅದರ ಆದೇಶ ಪ್ರತಿ ಲಭ್ಯವಾಗಿದ್ದು, ಹಲವು ಮಹತ್ವದ ನಿರ್ದೇಶನಗಳನ್ನು ನ್ಯಾಯಾಲಯ ನೀಡಿರುವುದು ಬೆಳಕಿಗೆ ಬಂದಿದೆ. 
ಮಾಧ್ಯಮಗಳು ಕೇವಲ ವರದಿ ಮಾಡುವುದಕ್ಕೆ ಸೀಮಿತವಾಗದೆ, ತಾವೇ ವಿಚಾರಣೆ ನಡೆಸಿ ಆರೋಪಿಯನ್ನು ಅಪರಾಧಿ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ನ್ಯಾಯಾಲಯದ ಕಲಾಪಗಳನ್ನು ಅಣಕಿಸುವ ರೀತಿಯಲ್ಲಿ ಟಿವಿ ಪರದೆಗಳ ಮೇಲೆ ವಿಚಾರಣೆಯ ದೃಶ್ಯಗಳನ್ನು ಮರುಸೃಷ್ಟಿಸುವುದು ಕಾನೂನು ಬಾಹಿರ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ.

ಆರು ವಾರಗಳಲ್ಲಿ ತನಿಖೆಗೆ ಗಡುವು: 

ನಿಯಮ ಉಲ್ಲಂಘಿಸಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರವು ತಕ್ಷಣವೇ ವಿಚಾರಣೆ ಆರಂಬಿಸಬೇಕು. ಆರು ವಾರಗಳ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಿ, 12 ವಾರಗಳಲ್ಲಿ ಈ ಬಗ್ಗೆ ಕೈಗೊಂಡ ಕ್ರಮಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದ ಆದೇಶವನ್ನು ಮೀರಿ ವರದಿಗಾರಿಕೆ ಮುಂದುವರಿಸಿದರೆ, ಪರವಾನಗಿ ಅಮಾನತುಗೊಳಿಸಲು ಅಥವಾ ದಂಡ ವಿಧಿಸಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.  #high court
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net