ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಆರು ವರ್ಗಗಳಲ್ಲಿ ಗುರುತಿಸಲಾಗಿದೆ ಎಂದು ಪ್ರಾಧಿಕಾರವನ್ನು ಪ್ರತಿನಿಧಿಸಿದ್ದ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಗುಂಪು ಭಿಕ್ಷಾಟನೆ, ಕೌಟುಂಬಿಕ ವ್ಯವಹಾರಗಳಲ್ಲಿನ ಮಕ್ಕಳು, ಕೂಲಿ ಅಥವಾ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವವರು, ಅಂಗವಿಕಲ ಮಕ್ಕಳ ಭಿಕ್ಷಾಟನೆ, ತಾಯಂದಿರ ಜತೆ ಹಸುಗೂಸುಗಳ ಬಳಕೆ ಮತ್ತು ಮಾಫಿಯಾಗಳ ಮೂಲಕ ಬಲವಂತವಾಗಿ ಭಿಕ್ಷಾಟನೆಗೆ ದೂಡಲ್ಪಟ್ಟ ಮಕ್ಕಳು ಇದ್ದಾರೆ ಎಂದು ಗುರುತಿಸಲಾಗಿದೆ.