_1775744169509.webp?w=480&auto=format%2Ccompress&fit=max)
_1775744169509.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಏನಿದು ವಿವಾದ?:
ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್ಐಸಿ ವೈದ್ಯಕಿಯ ಕಾಲೇಜಿನಲ್ಲಿ 2012-13ನೇ ಸಾಲಿನಲ್ಲಿ ಎಂಬಿಬಿಎಸ್ ಶಿಕ್ಷಣಕ್ಕೆ ಪ್ರವೇಶ ಪಡೆದ 6 ಮಂದಿ ವಿದ್ಯಾರ್ಥಿಗಳು ಇಎಸ್ಐಸಿ ಸೇವಾ ಬಾಂಡ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಾವು ಈಗಾಗಲೇ ರಾಜ್ಯ ಸರ್ಕಾರದ ನಿಯಮದಂತೆ ಒಂದು ವರ್ಷ ಗ್ರಾಮೀಣ ಸೇವೆ ಸಲ್ಲಿಸಲು ಬದ್ಧರಾಗಿದ್ದೇವೆ. ಹಾಗಿರುವಾಗ ಇಎಸ್ಐಸಿ ಸಂಸ್ಥೆಯು ಮತ್ತೆ ಐದು ವರ್ಷ ಕಡ್ಡಾಯ ಸೇವೆಗೆ ಒತ್ತಾಯಿಸುವುದು ಸರಿಯಲ್ಲ ಎಂದು ವಾದಿಸಿದ್ದರು. ಇದನ್ನು ಏಕಸದಸ್ಯ ನ್ಯಾಯಪೀಠ ಪರಿಗಣಿಸಿತ್ತು. ಈ ಆದೇಶದ ವಿರುದ್ಧ ಇಎಸ್ಐಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.