ಸಾಕ್ಷ್ಯಾಧಾರಗಳಿಲ್ಲದೆ ಬ್ಯಾಂಕ್ ಖಾತೆ ನಿರ್ಬಂಧ ಸಲ್ಲ| High court
High court
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಖಾಸಗಿ ಬ್ಯಾಂಕ್ಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ತನಿಖಾ ಸಂಸ್ಥೆಗಳಿಂದ ಯಾವುದೇ ಅಧಿಕೃತ ಸೂಚನೆ ಅಥವಾ ವಂಚನೆಯ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳಿಲ್ಲದೆ ಬ್ಯಾಂಕ್ ಖಾತೆಗಳನ್ನು ನಿರ್ಬಂಧ (ಫ್ರೀಜ್) ಮಾಡುವುದು ಕಾನೂನುಬಾಹಿರವಾಗಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.
ತಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಿದ ಖಾಸಗಿ ಬ್ಯಾಂಕ್ನ ಕ್ರಮವನ್ನು ಪ್ರಶ್ನಿಸಿ ದೆಹಲಿ ಮೂಲದ ಉದ್ಯಮಿ ದೀಪಕ್ ಗುಪ್ತಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ತಕ್ಷಣವೇ ಅರ್ಜಿದಾರರ ಖಾತೆಯ ಮೇಲಿನ ರ್ನಿಬಂಧವನ್ನು ತೆಗೆದುಹಾಕುವಂತೆ ಬ್ಯಾಂಕ್ಗೆ ಸೂಚಿಸಲಾಗಿದೆ.
ಸೈಬರ್ ಕೆಂ ಪೋರ್ಟಲ್ನಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ ಈ ಕ್ರಮ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮ್ಯಾಜಿಸ್ಟ್ರೆಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಆದ್ದರಿಂದ ಅವರು ಹೈಕೋರ್ಟ್ ಮೇಟ್ಟಿಲೇರಿದ್ದರು.
ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಬೆಂಗಳೂರಿನ ಸಿಎಎನ್ ಕ್ರೈಂ ಪೊಲೀಸರು, ಖಾತೆಯನ್ನು ನಿರ್ಬಂಧಿಸಲು ತಾವು ಬ್ಯಾಂಕ್ಗೆ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೆ, ಅರ್ಜಿದಾರರಿಗೂ ಮತ್ತು ಪ್ರಕರಣಕ್ಕೆ ಯಾವುದೇ ನೇರ ಸಂಬಂಧವಿಲ್ಲ ಎಂದು ತಿಳಿಸಿದ್ದರು.
ಗ್ರಾಹಕರ ಹಕ್ಕಿನ ಉಲ್ಲಂಘನೆ
ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಬ್ಯಾಂಕ್ ತನ್ನ ಗ್ರಾಹಕರ ಖಾತೆಯನ್ನು ಯಾಂತ್ರಿಕವಾಗಿ ನಿರ್ಬಂಧಿಸುವಂತಿಲ್ಲ. ತನಿಖಾ ಸಂಸ್ಥೆಯಿಂದ ಯಾವುದೇ ಲಿಖಿತ ಸೂಚನೆ ಇಲ್ಲದಿದ್ದರೂ ಅರ್ಜಿದಾರರ ಖಾತೆಯನ್ನು ರ್ನಿಬಂಧಿಸಿರುವುದು ಸರಿಯಲ್ಲ. ಇದು ಅವರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.