

ಪ್ರಮುಖ ಮುಖ್ಯಾಂಶಗಳು
ಆರೋಗ್ಯ ಸ್ಥಿತಿ ಪರಿಗಣನೆ
ವಿಚಾರಣೆ ವೇಳೆ ರಿಯಾಜ್ ಪರ ವಾದಿಸಿದ್ದ ವಕೀಲರು, ಅರ್ಜಿದಾರರು ಬೇರೊಂದು ಅಪಘಾತದಲ್ಲಿ ಗಾಯಗೊಂಡಿದ್ದು, ಅವರ ಬಲಗಾಲಿಗೆ ರಾಡ್ ಅಳವಡಿಸಲಾಗಿದೆ. ಇಂದರಿಂದ ಅವರು ಚಾಲಕನ ಕೆಲಸ ಕಳೆದುಕೊಂಡಿದ್ದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಜೀವನ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಮೃತ ವ್ಯಕ್ತಿಯ ಕುಟುಂಬದವರು ಹೆಚ್ಚಿನ ಪರಿಹಾರ ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ, 1 ಲಕ್ಷ ರೂ. ಗಳನ್ನು ಎರಡು ಸಮಾನ ಕಂತುಗಳಲ್ಲಿ ಪಾವತಿಸುವ ಷರತ್ತಿನೊಂದಿಗೆ ಶಿೆಯ ಪ್ರಮಾಣವನ್ನು ಕಡಿತಗೊಳಿಸಿದೆ.