ಮನಸ್ಸಿಟ್ಟು ಕಲಿತರೆ ಉನ್ನತ ಸಾಧನೆ ಸಾಧ್ಯ

ಅರಕಲಗೂಡಿನಲ್ಲಿ ಟೈಮ್ಸ್ ಹಾಸನ ಪಿಯು ಕಾಲೇಜು ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ. ಮಂಜು, ಕೆ.ಸಿ. ಸೌಮ್ಯಾ, ಬಿ.ಕೆ. ಗಂಗಾಧರ್, ನವೀನ್ ಪಿ. ಉಲಿವಾಲ, ಲೀಲಾವತಿ ಇದ್ದರು.
ಅರಕಲಗೂಡಿನಲ್ಲಿ ಟೈಮ್ಸ್ ಹಾಸನ ಪಿಯು ಕಾಲೇಜು ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ. ಮಂಜು, ಕೆ.ಸಿ. ಸೌಮ್ಯಾ, ಬಿ.ಕೆ. ಗಂಗಾಧರ್, ನವೀನ್ ಪಿ. ಉಲಿವಾಲ, ಲೀಲಾವತಿ ಇದ್ದರು.
Published on
ಅರಕಲಗೂಡು: ವಿದ್ಯೆ ಸಾಧಕರ ಸ್ವತ್ತಾಗಿದ್ದು ಪರಿಶ್ರಮ ವಹಿಸಿ, ಮನಸ್ಸಿಟ್ಟು ಕಲಿತರೆ ಉನ್ನತ ಸಾಧನೆ ಸಾಧ್ಯ ಎಂದು ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ಟೈಮ್ಸ್ ಹಾಸನ ಪಿಯು ಕಾಲೇಜು ವತಿಯಿಂದ ಕೆ.ಎನ್.ಎ. ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆದರ್ಶ ವ್ಯಕ್ತಿಗಳು ಹಾಗೂ ಸಾಧಕರನ್ನು ಮಾದರಿಯಾಗಿಟ್ಟುಕೊಂಡು ಪ್ರಯತ್ನ ನಡೆಸಿದಾಗ ಮಾತ್ರ ಬದುಕಿನಲ್ಲಿ ನೀರೀಕ್ಷತ ಗುರಿ ತಲುಪಲು ಸಾಧ್ಯ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಟೈಮ್ಸ್ ಹಾಸನ ಪಿಯು ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಎಂದರು.
ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಕೀಳಿರಿಮೆ ತೊರೆದು ಓದಿನ ಕಡೆ ಗಮನಹರಿಸಿ ಉನ್ನತ ಸಾಧನೆ ಮಾಡಬೇಕು. ಬಹಳಷ್ಟು ಸಾಧಕರು ಸಣ್ಣ ಊರುಗಳಿಂದ ಬಂದವರಾಗಿದ್ದಾರೆ. ಕೆಲಸಕ್ಕಾಗಿ ಕೈಚಾಚದೆ ಕೆಲಸ ಕೊಡುವವರಾಗಲು ಪ್ರಯತ್ನಿಸಿ, ಹಣಗಳಿಕೆಯೆ ಮುಖ್ಯವಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವತ್ತ ಗಮನಹರಿಸಿ ಎಂದರು.
ತಹಸೀಲ್ದಾರ್ ಕೆ.ಸಿ. ಸೌಮ್ಯಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳು ತೊರೆದು ಓದಿನ ಕಡೆ ಚಿತ್ತ ಹರಿಸಿದರೆ ಜೀವನದ ಗುರಿ ತಲುಪಲು ಸಾಧ್ಯ. ಸ್ಪರ್ಧೆಗಳನ್ನು ಎದುರಿಸಲು ಕಲಿಕಾ ಸಾಮರ್ಥ್ಯವೂ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪಿ. ನವೀನ್ ಉಲಿವಾಲ ಮಾತನಾಡಿದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಲೀಲಾವತಿ, ಉಪನ್ಯಾಸಕರಾದ ಕೃಷ್ಣಮೂರ್ತಿ, ರಾಕೇಶ್ ಇತರರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net