ಹಿಡಕಲ್ಲ ಜಲಾಶಯ ಭರ್ತಿ

ಹಿಡಕಲ್ಲ ಜಲಾಶಯದ ಎರಡು ಕ್ರಸ್ಟ್ ಗೇಟ್ ಮೂಲಕ 5 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭ ನದಿಗೆ ಬಿಟ್ಟಿರುವುದು.
ಹಿಡಕಲ್ಲ ಜಲಾಶಯದ ಎರಡು ಕ್ರಸ್ಟ್ ಗೇಟ್ ಮೂಲಕ 5 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭ ನದಿಗೆ ಬಿಟ್ಟಿರುವುದು.
Published on

ಹುಕ್ಕೇರಿ: ಹಿಡಕಲ್ಲ ಡ್ಯಾಮಿನ ರಾಜಾ ಲಖಮಗೌಡ ಜಲಾಶಯ ಭರ್ತಿಯಾಗಿದ್ದು, 5,000 ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಬೀಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟಕ್ಕೆ ನೀರು ಸಂಗ್ರಹವಾಗಿದೆ. ಆದ್ದರಿಂದ ನೀರಿನ ಒಳ ಹರಿವು 8,523 ಕ್ಯೂಸೆಕ್ ಇದ್ದು, ಕಾಲುವೆ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಸಿ ಉಳಿದ ನೀರನ್ನು ನದಿಗೆ ಬಿಡಲಾಗುತ್ತಿದೆ. ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಬಹುದು. ಘಟಪ್ರಭಾ ಮತ್ತು ಹಿರಣ್ಯಕೇಶಿ ಪ್ರವಾಹ ಭೀತಿ ತಲೆದೋರುವ ಮುನ್ನ ನದಿ ಪಾತ್ರದ ಗ್ರಾಮಗಳ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ನೀರಾವರಿ ನಿಗಮದ ಎಇಇ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net