ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಪಪಂ ಮುಖ್ಯಾಧಿಕಾರಿ ನಾಗೇಶ ಚಾಲನೆ ನೀಡಿದರು. ಡಾ. ಮಾರುತಿ ಎಂ., ವಿ.ಎಸ್.ಶಿವಪ್ಪಯ್ಯನಮಠ, ಶಿವಕುಮಾರ ಐನಕ್ಕಿ, ಸಂಗಪ್ಪ ಕುರಿ, ವೀಣಾ ಮಂಟೂರ್, ಮಧುಮತಿ, ಬಸವರಾಜ, ಸವಿತಾ, ಗೀತಾಂಜಲಿ ಇತರರಿದ್ದರು.
Published on:
Copied
Follow Us
ಯಲಬುರ್ಗಾ: ಪೋಲಿಯೋ ಲಸಿಕೆ ಪ್ರತಿ ಐದು ವರ್ಷದೊಳಗಿನ ಮಗುವಿಗೂ ಅತ್ಯಗತ್ಯವಾಗಿದ್ದು, ಲಸಿಕೆ ನೀಡುವುದರಿಂದ ಮಕ್ಕಳ ಆರೋಗ್ಯ ಸದೃಢವಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಎಚ್. ಹೇಳಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಮುಖ್ಯ ವೈದ್ಯಾಧಿಕಾರಿ ಕೃಷ್ಣ ಹೊಟ್ಟಿ ಮಾತನಾಡಿ, ಪೋಲಿಯೋ ಸೋಂಕು ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಅಪಾಯಕಾರಿ ಕಾಯಿಲೆಯಾಗಿದ್ದು, ಅದರ ವಿರುದ್ಧ ಲಸಿಕೆಯೇ ಪರಿಣಾಮಕಾರಿ ರಕ್ಷಣೆಯಾಗಿದೆ ಎಂದರು.