ಬಡವರಿಗೆ ನೆರವು ನೀಡುವುದೇ ನಿಜವಾದ ಹುಟ್ಟುಹಬ್ಬ; ಶಾಸಕ ಎಸ್.ಮುನಿರಾಜು ಅಭಿಮತ

ತಮ್ಮ ಜನ್ಮದಿನದ ಅಂಗವಾಗಿ ಕಾರ್ಯಕರ್ತರು ಏರ್ಪಡಿಸಿದ್ದ ಅಭಿಮಾನೋತ್ಸವದಲ್ಲಿ ಶಾಸಕ ಎಸ್.ಮುನಿರಾಜು ಬಡ ವ್ಯಾಪಾರಸ್ಥರಿಗೆ ತಳ್ಳುವ ಗಾಡಿ ವಿತರಿಸಿದರು. ಭರತ್ ಸೌಂದರ್ಯ ಮತ್ತಿತರರು ಉಪಸ್ಥಿತರಿದ್ದರು.
ತಮ್ಮ ಜನ್ಮದಿನದ ಅಂಗವಾಗಿ ಕಾರ್ಯಕರ್ತರು ಏರ್ಪಡಿಸಿದ್ದ ಅಭಿಮಾನೋತ್ಸವದಲ್ಲಿ ಶಾಸಕ ಎಸ್.ಮುನಿರಾಜು ಬಡ ವ್ಯಾಪಾರಸ್ಥರಿಗೆ ತಳ್ಳುವ ಗಾಡಿ ವಿತರಿಸಿದರು. ಭರತ್ ಸೌಂದರ್ಯ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಟ್ಟುಹಬ್ಬ ಹಾಗೂ ಹಬ್ಬ ಹರಿದಿನಗಳಲ್ಲಿ ಬಡವರಿಗೆ ನೆರವು ನೀಡಿ
  • ದಾಸರಹಳ್ಳಿ ಶಾಸಕ ಎಸ್. ಮುನಿರಾಜು ಕರೆ
  • ಜನ್ಮದಿನದಂದು ಬಡ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ

ಬೆಂಗಳೂರು:ತಮ್ಮ ಹುಟ್ಟುಹಬ್ಬಹಾಗೂ ಹಬ್ಬ ಹರಿದಿನಗಳಲ್ಲಿ ಬಡಜನರಿಗೆ ನೆರವು ನೀಡುವ ಮೂಲಕಜೀವನದಲ್ಲಿ ಸಾರ್ಥಕತೆ ಮೆರೆಯಬೇಕುಎಂದು ಶಾಸಕ ಎಸ್.ಮುನಿರಾಜುತಿಳಿಸಿದರು.

ಬಾಗಲಗುಂಟೆಯಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿಕಾರ್ಯಕರ್ತರು ಆಯೋಜಿಸಿದ್ದ’ಅಭಿಮಾನೋತ್ಸವ’ ಸಮಾರಂಭದಲ್ಲಿಮಾತನಾಡಿದರು.

ಹುಟ್ಟುಮತ್ತು ಸಾವಿನ ಮಧ್ಯೆ ಜೀವಿತಅವಧಿಯಲ್ಲಿ ಸಮಾಜಕ್ಕೆ ನಾವುನೀಡುವ ಒಳ್ಳೆಯ ಕೊಡುಗೆ ಮಾತ್ರಶಾಶ್ವತವಾಗಿ ಉಳಿಯಲಿದೆ ಎಂದುಮುನಿರಾಜು ಹೇಳಿದರು.

ಬಿಜೆಪಿಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಭರತ್ ಸೌಂದರ್ಯ ಬಡ ವ್ಯಾಪಾರಸ್ಥರಿಗೆಕೊಡಮಾಡಿದ ತಳ್ಳುವ ಗಾಡಿಗಳನ್ನುಮುನಿರಾಜು ವಿತರಿಸಿದರು.ಇದೆ ವೇಳೆ ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿನಿಗಮದ ವತಿಯಿಂದ ಫಲಾನುಭವಿಗಳಿಗೆಟ್ಯಾಕ್ಸಿಗಳನ್ನು ವಿತರಿಸಲಾಯಿತು.

ಈಸಂದರ್ಭದಲ್ಲಿ ಮಾತನಾಡಿದ ಭರತ್ಸೌಂದರ್ಯ, ಬಡವ್ಯಾಪಾರಿಗಳಿಗೆ ತಳ್ಳುವ ಗಾಡಿಗಳು,ಪೌರಕಾರ್ಮಿಕರಿಗೆಬಟ್ಟೆ ಮತ್ತು ಗೌರವಧನ,ಸವಿತಾ ಸಮಾಜದಸಮುದಾಯದವರಿಗೆ ಸಲಕರಣೆಗಳು,ಲೈನ್ ಮ್ಯಾನ್‌ಗಳಿಗೆಬಟ್ಟೆ ಮತ್ತು ಗೌರವ ಧನ,ಆಟೋ ಚಾಲಕರಿಗೆಸಮವಸ್ತ್ರ ಮತ್ತು ಗೌರವಧನ ಹೀಗೆನಮ್ಮ ಕೈಲಾದ ಸೇವೆ ಮಾಡಿದ್ದುಮನಸ್ಸಿಗೆ ಸಮಾಧಾನ ನೀಡಿದೆ ಎಂದರು.

ಸಮಾರಂಭದಲ್ಲಿಶೆಟ್ಟಿಹಳ್ಳಿ ವಾರ್ಡ್ ಅದ್ಯಕ್ಷಬಿ.ಸುರೇಶ್,ಸುಜಾತ ಮುನಿರಾಜು,ನಿಶ್ಚಲ್,ಅನಿಲ್ ,ಮಹಿಳಾ ಮುಖಂಡರಾದಚಿಕ್ಕಬಾಣವಾರ ಭಾಗ್ಯಮ್ಮ ನೂರಾರುಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net