ಸವಾರರ ಸಾವು ತಪ್ಪಿಸಲು ಶಿರಸ್ತ್ರಾಣ ಕಡ್ಡಾಯ Helmets

ಸವಾರರ ಸಾವು ತಪ್ಪಿಸಲು ಶಿರಸ್ತ್ರಾಣ ಕಡ್ಡಾಯ Helmets
ಸವಾರರ ಸಾವು ತಪ್ಪಿಸಲು ಶಿರಸ್ತ್ರಾಣ ಕಡ್ಡಾಯ Helmets
Published on

ಪ್ರಮುಖ ಮುಖ್ಯಾಂಶಗಳು

  • 8ರಿಂದ ಕೆಜಿಫ್​, ಬಂಗಾರಪೇಟೆ ವ್ಯಾಪ್ತಿಯಲ್ಲಿ ಜಾರಿ
  • ನಿಯಮ ಮೀರಿದರೆ ಕಾನೂನು ಕ್ರಮ
ಬಂಗಾರಪೇಟೆಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಕೋಲಾರ ಮತ್ತು ಕೆಜಿಎ್​ ಎರಡು ಪೊಲೀಸ್​ ವಿಭಾಗಗಳಿದ್ದು, ಈಗಾಗಲೇ ಕೋಲಾರ ವ್ಯಾಪ್ತಿಯಲ್ಲಿ ಡಿ.1ರಿಂದ ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದನ್ನು ಕಡ್ಡಾಯ ಮಾಡಿದ್ದು, ಅದೇ ರೀತಿ ಕೆಜಿಎ್​ ವ್ಯಾಪ್ತಿಯಲ್ಲೂ ಡಿ.8ರಿಂದ ಶಿರಸ್ತ್ರಾಣ ಕಡ್ಡಾಯಕ್ಕೆ ಕೆಜಿಫ್ ಪೊಲೀಸ್​ ಇಲಾಖೆ ಮುಂದಾಗಿದೆ. Helmets
ಬಂಗಾರಪೇಟೆ ಮತ್ತು ಕೆಜಿಎಫ್​ ತಾಲೂಕುಗಳ ವ್ಯಾಪ್ತಿಗೆ ಬರುವ  ಆಯಾ ಠಾಣೆ ವ್ಯಾಪ್ತಿಗಳಲ್ಲಿ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಲ್ಮೆಟ್​ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಕೆಜಿಎಫ್​ ಪೊಲೀಸ್​ ಜಿಲ್ಲಾ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತಗಳ ಅಂಕಿ&ಅಂಶ ಪರಿಶೀಲಿಸಿದಾಗ ಆತಂಕಕಾರಿ ವಿಷಯ ಹೊರಬಿದ್ದಿದ್ದು, ಕಳೆದ 3 ವರ್ಷಗಳಲ್ಲಿ ಒಟ್ಟು 216 ಜನ ಮೃತಪಟ್ಟಿದ್ದು, ಆ ಪೈಕಿ 168 ಮಂದಿ ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ. ಇವರಲ್ಲಿ ಶೇ.90 ಮಂದಿ ಹೆಲ್ಮೆಟ್​ ಧರಿಸದಿರುವುದೇ ಸಾವಿಗೆ ಕಾರಣವಾಗಿದೆ.
ಅಮಾಯಕರ ಸಾವು ತಪ್ಪಿಸುವ ಉದ್ದೇಶದಿಂದ ಮತ್ತು ಕಾನೂನು ಜಾಗೃತಿ ಹೆಚ್ಚಿಸುವುದಕ್ಕಾಗಿ ಹೆಲ್ಮೆಟ್​ ಕಡ್ಡಾಯಕ್ಕೆ ಇಲಾಖೆ ಮುಂದಾಗಿದೆ.
ಇನ್ನು ಹೆಲ್ಮೆಟ್​ ಇಲ್ಲದ ವಾಹನ ಸವಾರರ ವಿರುದ್ಧ ತೆಗೆದುಕೊಳ್ಳುವ ಕಾನೂನು ಕ್ರಮಗಳು ದುರುಪಯೋಗ ಆಗದಂತೆ ಕ್ರಮ ವಹಿಸುವುದುಮೇಲಧಿಕಾರಿಗಳ ಕರ್ತವ್ಯವೂ ಆಗಿದೆ. 
ಕಾರಹಳ್ಳಿ, ದೇಶಿಹಳ್ಳಿ, ಬೂದಿಕೋಟೆ ವೃತ್ತ,  ಕೋಲಾರ ಮುಖ್ಯ ರಸ್ತೆ ಸೇರಿದಂತೆ ಸಂದಿಗೊಂದಿಗಳಿಂದ ಮನಸೋಇಚ್ಛೆ ವಾಹನ ಚಲಾಯಿಸುವವರನ್ನು ಹತೋಟಿಗೆ ತರಬೇಕಿದೆ. 
ಮೊದಲಿನಿಂದಲೂ ಕೆಜಿಎಫ್​ ಜಿಲ್ಲಾ ಪೊಲೀಸ್​ ವತಿಯಿಂದ ಸಾರ್ವಜನಿಕ ಸ್ಥಳಗಳು, ಶಾಲಾ ಕಾಲೇಜುಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸಂಚಾರಿ ನಿಯಮಗಳು ಮತ್ತು ಹೆಲ್ಮೆಟ್​ಧರಿಸುವುದರಿಂದಾಗುವ ಪ್ರಯೋಜನ ಕುರಿತು ಅರಿವು ಮೂಡಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅರಿವು ಮೂಡಿಸಲಾಗುತ್ತಿದೆ. ಕಳೆ ಮೂರು ದಿನಗಳಿಂದ ಬೇರೆ ಬೇರೆ ವಿಧಾನಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. 
"

ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ದ್ವಿಚಕ್ರ ವಾಹನ ಸವಾರರಿಗೆ ಡಿ. 8 ರಿಂದ ಹೆಲ್ಮೆಟ್​ಕಡ್ಡಾಯ ಮಾಡಲಾಗಿದೆ. ಎಚ್ಚೆತ್ತುಗೊಂಡು ಹೆಲ್ಮೆಟ್​ ಧರಿಸುವ ಮೂಲಕ ಪೊಲೀಸ್​ ಇಲಾಖೆಯೊಂದಿಗೆ ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net