

ಬೆಳಗಾವಿ: ಈಚೆಗೆ ನಿಧನರಾದ ಮಹಾರಾಷ್ಟ್ರದ ಹಿರಿಯ ನಾಯಕ, ಮಾಜಿ ರಾಜ್ಯಪಾಲ ಡಾ.ಡಿ.ವೈ.ಪಾಟೀಲ ಮನೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಡಾ.ಡಿ.ವೈ.ಪಾಟೀಲ ಪುತ್ರ, ವಿಧಾನ ಪರಿಷತ್ ಸದಸ್ಯ ಸತೇಜ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳ್ಕರ ಇತರರಿದ್ದರು.