ಶ್ರವಣ ದೋಷ ಸಾಧನ ಸಮರ್ಪಕವಾಗಿ ಬಳಕೆಯಾಗಲಿ

Hearing aids should be used appropriately.
Hearing aids should be used appropriately.
Published on
ಚಿಕ್ಕಬಳ್ಳಾಪುರ: ಸರ್ಕಾರಿ ಸವಲತ್ತುಗಳನ್ನು ಒದಗಿಸುವಲ್ಲಿಯೂ ಮಾನವೀಯತೆ ಮೆರೆಯಬೇಕು ಎಂದು ಉನ್ನತ ಶಿಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ರಾಜ್​ ಮಹಲ್​ ವಿಲಾಸ್​, ಮೂವಟೆ, ಸಂವಾದ ಫೌಂಡೇಶನ್​ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಉಚಿತ ಶ್ರವಣ ದೋಷ ತಪಾಸಣೆ ಮತ್ತು ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಜನನ ಸಂದರ್ಭದಲ್ಲಿ ಕೆಲವು ದೈಹಿಕ, ಮಾನಸಿಕ ದೋಷಗಳು ಕಂಡುಬರುವುದಿಲ್ಲ. ಆದರೆ, ಮಗು ಬೆಳವಣಿಗೆಯಾದಂತೆ ಶ್ರವಣ, ದೃಷ್ಟಿ ಹಾಗೂ ಇನ್ನಿತರ ದೋಷಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ$್ಯ ಕಾರ್ಯಕ್ರಮದಡಿ ಇಂದು ಅಳವಡಿಸಿರುವ ಶ್ರವಣ ದೋಷ ಸಾಧನಗಳನ್ನು 111 ಮಕ್ಕಳು ಸಮರ್ಪಕವಾಗಿ ಬಳಸಬೇಕು. ಉಚಿತ ಕೊಡುಗೆ ಎಂಬ ಭಾವನೆಯಲ್ಲಿ ರ್ನಿಲಸಬಾರದು ಎಂದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವೈ.ನವೀನ್​ ಭಟ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್​ ಕುಮಾರ್​, ರೋಟರಿ ರಾಜ್​ ಮಹಲ್​ ವಿಲಾಸ್​ ಸಂಸ್ಥೆಯ ಪ್ರತಿನಿಧಿ ರಾಜಾರಾಮ್​ ಕೃಷ್ಣಮೂರ್ತಿ, ಮೂವೆಟ್​ ಸಂಸ್ಥೆಯ ಸಂಯೋಜಕಿ ದಿವ್ಯಾ ಅಗರ್ವಾಲ್​, ಸಂವಾದ ಫೌಂಡೇಶನ್​ನ ಸಂಯೋಜಕಿ ರಾಧಿಕ ಪೂವಯ್ಯ, ಇಂಡಿಯಾ ಎನ್​ಜಿಒ ಸಂಸ್ಥೆಯ ಕೃಷ್ಣಮೂರ್ತಿ, ಆರ್​.ಸಿ.ಎಚ್​. ಅಧಿಕಾರಿ ಡಾ. ಸಂತೋಷ್​ಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಚಂದ್ರಶೇಖರರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್​ ರೆಡ್ಡಿ, ಶಾಲಾ ಶಿಣ ಇಲಾಖೆಯ ಉಪ ನಿರ್ದೇಶಕ ರಮೇಶ್​ ಇದ್ದರು.
"

ಉಚಿತ ಚಿಕಿತ್ಸಾ ಸೇವೆ: ರಾಷ್ಟ್ರೀಯ ಬಾಲ ಸ್ವಾಸ್ಥ$್ಯ ಕಾರ್ಯಕ್ರಮದಡಿ ಅಂಗನವಾಡಿ ಮಕ್ಕಳಿಗೆ ವರ್ಷಕ್ಕೆ ನಾಲ್ಕು ಬಾರಿ ಹಾಗೂ ಶಾಲಾ ಮಕ್ಕಳಿಗೆ ಎರಡು ಬಾರಿ ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅದರಂತೆ ಜಿಲ್ಲೆಯ 2,12,000 ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಗತ್ಯವಿರುವವರಿಗೆ ಶಸಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಾಗಿದೆ. ಹಾಗೆಯೇ ಕನ್ನಡಕ ಹಾಗೂ ಶ್ರವಣ ದೋಷ ನಿವಾರಣಾ ಸಾಧನಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಮಾಹಿತಿ ನೀಡಿದರು.

"

ಮಕ್ಕಳಿಗೆ ಮಾರ್ಗದರ್ಶನ: ಸಾಧನಗಳನ್ನು ಯಾವ ರೀತಿ ನಿರ್ವಹಿಸಬೇಕು? ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಬದಲಾವಣೆಗಳ ಬಗ್ಗೆ ತ ವೈದ್ಯರು ಮಾರ್ಗದರ್ಶನ ನೀಡಿದರು. ಬಳಕೆಯ ಸೂಚನೆಗಳ ಬಗೆಗಿನ ಮಾಹಿತಿ ಕಾಡ್​ಅನ್ನು ವಿತರಿಸಲಾಯಿತು. ಯಾವುದೇ ಸಂಶಯಗಳಿದ್ದಲ್ಲಿ ವೈದ್ಯಾಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಬಗೆಹರಿಸಿಕೊಳ್ಳಲು ಸೂಚಿಸಲಾಯಿತು. ಬಳಕೆ ಹಾಗೂ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆಯ ಮುಂದಿನ ವಾರದಲ್ಲಿ ಒಂದು ದಿನ ಮಾರ್ಗದರ್ಶಿ ಕಾರ್ಯಕ್ರಮ ಕೈಗೊಳ್ಳುವ ಮಾಹಿತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net