ಉತ್ತಮ ಜೀವನಕ್ಕೆ ಆರೋಗ್ಯ ಮುಖ್ಯ

ಭಾಲ್ಕಿ ಚನ್ನಬಸವಾಶ್ರಮ ಪರಿಸರದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಪ್ರಮುಖರಾದ ಡಿ.ಕೆ.ಸಿದ್ರಾಮ, ರಾಜಶೇಖರ ಅಷ್ಟೂರೆ, ಪ್ರಸನ್ನ ಖಂಡ್ರೆ, ಡಾ.ಸಜ್ಜಲ ಬಳತೆ ಇತರರಿದ್ದರು.
ಭಾಲ್ಕಿ ಚನ್ನಬಸವಾಶ್ರಮ ಪರಿಸರದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಪ್ರಮುಖರಾದ ಡಿ.ಕೆ.ಸಿದ್ರಾಮ, ರಾಜಶೇಖರ ಅಷ್ಟೂರೆ, ಪ್ರಸನ್ನ ಖಂಡ್ರೆ, ಡಾ.ಸಜ್ಜಲ ಬಳತೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯ
  • ಭಾಲ್ಕಿಯಲ್ಲಿ ಉಚಿತ ತಪಾಸಣೆ ಶಿಬಿರ
ಭಾಲ್ಕಿ : ಪ್ರತಿಯೊಬ್ಬರೂ ಉತ್ತಮ ಜೀವನಕ್ಕಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯಕ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್​ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ&2026, ಡಾ.ಚನ್ನಬಸವ ಪಟ್ಟದ್ದೇವರ 27ನೆಯ ಸ್ಮರಣೋತ್ಸವ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಬಿ.ಕೆ.ಬಳತೆ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ನಮಗೆ ಯಾವುದೇ ಸಮಸ್ಯೆ ಬಂದರೂ ನಾವು ಕುಳಿತು ಪರಿಹರಿಸಿಕೊಳ್ಳಬಹುದು. ಆದರೆ, ನಮ್ಮ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೇ ವೈದ್ಯರ ಬಳಿ ಹೋಗಲೇಬೇಕಾಗುತ್ತದೆ. ಹಾಗಾಗಿ ಯಾವುದೇ ಮುಜಗರಕ್ಕೆ ಒಳಪಡದೇ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣವರ ಜಯಂತಿ, ವಚನ ಜಾತ್ರೆ, ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಬಿ.ಕೆ.ಬಳತೆ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ. ಈ ಶಿಬಿರದಿಂದ ಬಡ ಜನರಿಗೆ ಅನುಕೂಲವಾಗಿದೆ. ನೂರಾರು ಯುವಕರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದರು.
ಪುಷ್ಪಾವತಿ ಕಾಶಪ್ಪ ಬಳತೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ಯುವ ಮುಖಂಡರಾದ ಡಿ.ಕೆ.ಸಿದ್ರಾಮ, ಪ್ರಸನ್ನ ಖಂಡ್ರೆ, ಬಸವ ಜಯಂತಿ ಮೆರವಣಿಗೆ ಸಮಿತಿ ಅಧ್ಯಕ್ಷ ಯೋಗೇಶ ಅಷ್ಟೂರೆ, ಡಾ.ಅಮಿತ ಅಷ್ಟೂರೆ, ಮಲ್ಲಮ್ಮ ನಾಗನಕೇರೆ, ಪ್ರಜ್ವಲ ಬಳತೆ ಇತರರಿದ್ದರು.
\70 ಯುವಕರು ರಕ್ತದಾನ
ಉಚಿತ ಆರೋಗ್ಯ ಶಿಬಿರದಲ್ಲಿ 150 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸೂಕ್ತ ಸಲಹೆ ಪಡೆದರು. ಸುಮಾರು 70 ಯುವಕರು ರಕ್ತದಾನ ಮಾಡಿದರು. ಡಾ.ಸಜ್ಜಲ ಬಳತೆ, ಡಾ.ರಾಹುಲ ರಾಜುರೆ, ಡಾ.ರಾಮಲಿಂಗ ವಳಸಂಗೆ, ಡಾ.ವಿಕ್ರಮ ದೇವಪ್ಪ, ಡಾ.ಅಮಿತ ಅಷ್ಟೂರೆ, ಡಾ.ಪ್ರಶಾಂತ ಮಠಪತಿ, ಡಾ.ಶಿವರಾಜಿ ಗುರದಳೆ ಮತ್ತು ಡಾ.ಲಕ್ಷಿ$್ಮಕಾಂತ ಐನಾಪುರೆ ಆರೋಗ್ಯ ತಪಾಸಣೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net