14,500 ಮಕ್ಕಳಿಗೆ ಆರೋಗ್ಯ ತಪಾಸಣೆ Ground-breaking ceremony

ಮಧುಗಿರಿ Ground-breaking ceremony ತಾಲೂಕಿನ ರಂಗಾಪುರ ಗ್ರಾಮದಲ್ಲಿ 7 ಕೋಟಿ ರೂ. ವೆಚ್ಚದ ಎರಡು ಸೇತುವೆ ನಿಮಾರ್ಣ ಕಾಮಗಾರಿಗೆ ಶಾಸಕ ಕೆ.ಎನ್​. ರಾಜಣ್ಣ ಭೂಮಿ ಪೂಜೆ ನೆರವೇರಿಸಿದರು. ಮುಖಂಡ ಹರ್ಷ ಕುರುಬರಹಳ್ಳಿ, ಟಿಎಪಿಸಿಎಂಎಸ್​ ಆಧ್ಯಕ್ಷ ಎಂ.ಎಸ್​.ಮಲ್ಲಿಕಾರ್ಜುನಯ್ಯ, ಪಿಡಬ್ಲ್ಯುಡಿ ಇಇ ಹನುಮಂತ ರಾವ್​ ಇದ್ದರು.
ಮಧುಗಿರಿ Ground-breaking ceremony ತಾಲೂಕಿನ ರಂಗಾಪುರ ಗ್ರಾಮದಲ್ಲಿ 7 ಕೋಟಿ ರೂ. ವೆಚ್ಚದ ಎರಡು ಸೇತುವೆ ನಿಮಾರ್ಣ ಕಾಮಗಾರಿಗೆ ಶಾಸಕ ಕೆ.ಎನ್​. ರಾಜಣ್ಣ ಭೂಮಿ ಪೂಜೆ ನೆರವೇರಿಸಿದರು. ಮುಖಂಡ ಹರ್ಷ ಕುರುಬರಹಳ್ಳಿ, ಟಿಎಪಿಸಿಎಂಎಸ್​ ಆಧ್ಯಕ್ಷ ಎಂ.ಎಸ್​.ಮಲ್ಲಿಕಾರ್ಜುನಯ್ಯ, ಪಿಡಬ್ಲ್ಯುಡಿ ಇಇ ಹನುಮಂತ ರಾವ್​ ಇದ್ದರು.
Published on

ದೊಡ್ಡೇರಿ:

ತಾಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ 14,500 ಮಕ್ಕಳಿಗೂ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಶಾಸಕ ಕೆ.ಎನ್​. ರಾಜಣ್ಣ ತಿಳಿಸಿದರು.

ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ರಂಗಾಪುರ ಗ್ರಾಮದಲ್ಲಿ 7 ಕೋಟಿ ರೂ. ವೆಚ್ಚದ ಎರಡು ಸೇತುವೆ Ground-breaking ceremony ನಿಮಾರ್ಣ ಕಾಮಗಾರಿಗೆ ಭೂಮಿ ಪೂಜೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಪ್ರಾರಂಭದಲ್ಲಿ ಆರೋಗ್ಯ ತಪಾಸಣೆ ಮಾಡಿದರೆ ಆರೋಗ್ಯವಂತ ಮಕ್ಕಳನ್ನು ಸಮಾಜದಲ್ಲಿ ನೋಡಬಹುದು. ಮುಂದಿನ ಒಂದೂವರೆ ತಿಂಗಳ ಒಳಗೆ ಎಲ್ಲ ಮಕ್ಕಳಿಗೂ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಂಗಾಪುರ ಗ್ರಾಮದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆ ನಿಮಾರ್ಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮಳೆಗಾಲದಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ, ರಂಗಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರ ಬಹುಕಾಲದ ಬೇಡಿಕೆಯಾಗಿದ್ದ ಸೇತುವೆ ನಿಮಾರ್ಣ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರಕಿಸಿಕೊಡುವ ಉದ್ದೇಶದಿಂದ ರಂಗಾಪುರ ಗ್ರಾಮದ ಸಮೀಪ 74.5 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಕಾಲೇಜು ನಿಮಾರ್ಣ ಮಾಡಲಾಗುತ್ತಿದೆ. 10 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇಲ್ಲಿ ಶಿಕ್ಷಣ ಪಡೆದರೆ ತಕ್ಷಣವೇ ಉದ್ಯೋಗ ದೊರೆಯಲಿದೆ ಎಂದರು.
ಮೇವು, ನೀರು ವಿಚಾರದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಮೇವಿನ ಕೊರತೆ ಬರದಂತೆ ಕ್ರಮ ವಹಿಸಲಾಗಿದ್ದು, ಬರ ಪರಿಸ್ಥಿತಿ ಕಂಡು ಬಂದಲ್ಲಿ, ಗೋಶಾಲೆ ತೆರೆದು ಗೋಪಾಲಕರಿಗೆ ಮಧ್ಯಾಹ್ನದ ವೇಳೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಕಳೆದ ವರ್ಷ ಬಹಳಷ್ಟು ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದು, ಈ ವರ್ಷ ಮಕ್ಕಳ ವಿದ್ಯಾರ್ಥಿವೇತನಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಿ ಯಾವುದೇ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಬಾರದು ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಎಇಇ ಸಂಪತ್​ ಕುಮಾರ್​, ಜಿಪಂ ಎಇಇ ಮಂಜುನಾಥ್​, ಬಿಇಒ ಹನುಮಂತರಾಯಪ್ಪ, ವಲಯ ಅರಣ್ಯಾಧಿಕಾರಿ ಸುರೇಶ್​, ತಾಪಂ ಇಒ ಬಿಕೆ ಉತ್ತಮ್​, ಸಹಾಯಕ ನಿರ್ದೇಶಕ ಧನಂಜಯ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಗೋಪಾಲಯ್ಯ, ಜಿಪಂ ಮಾಜಿ ಸದಸ್ಯರಾದ ಚೌಡಪ್ಪ, ಚಿನ್ನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ ನಂಜುಂಡಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net