ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾದ ಅಂಗವಿಕಲರಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ, ವಿವಿಧ ಸಾಂಸತಿಕ ಕಾರ್ಯಕ್ರಮದ ವಿಜೇತರಿಗೆ ಪ್ರಮಾಣಪತ್ರ, ದ್ವಿಚಕ್ರ ವಾಹನ ವಿತರಣೆ, ಗ್ರಂಥಾಲಯಕ್ಕೆ ದರ್ಶನಿ ಪರಿಕರಗಳು, ಲ್ಯಾಪ್ಟಾಪ್, ಶ್ರವಣ ಸಾಧನಗಳು, ಪಿಂಚಣಿ ಆದೇಶದ ಪತ್ರ ಹಾಗೂ ಅಂಗನವಾಡಿಗಳಿಗೆ ಕಿಟ್ ವಿತರಣೆ ಮಾಡಲಾಯಿತು.