ಬಡವರ ಬದುಕಿಗೆ ಆಸರೆಯಾಗಿದ್ದರು

ಕೊರಟಗೆರೆ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಮಂಜುನಾಥ್, ಉಪನ್ಯಾಸಕ ಹನುಮಂತ ನಾಯಕ್, ತಾಪಂ ಇಒ ಅಪೂರ್ವಾ, ಹಿಂದುಳಿದ ವರ್ಗಗಳ  ಕಲ್ಯಾಣಾಧಿಕಾರಿ ಅನಂತರಾಜು, ಪ್ರಾಂಶುಪಾಲ ಈರಪ್ಪನಾಯಕ್, ಬಿಇಒ ಪೈರೋಜ್‌ಬೇಗಂ, ವೈದ್ಯಾಧಿಕಾರಿ ಡಾ.ಜೋಸ್ನಾರೆಡ್ಡಿ, ಪಶುಸಂಗೋಪನಾ ಇಲಾಖೆ ಸುಧಾಕರ್, ಬಿಆರ್‌ಸಿ ರುದ್ರೇಶ್ ಇತರರು ಇದ್ದರು.

Published on

ಕೊರಟಗೆರೆ :

ದೇವರಾಜ ಅರಸು ಅವರು ಜೀತ ಪದ್ಧತಿ ರದ್ದುಗೊಳಿಸಿ ವಸತಿ ಹಾಗೂ ಪಿಂಚಣಿ ಯೋಜನೆ ಜಾರಿಗೊಳಿಸುವ ಮೂಲಕ ಬಡವರ ಬದುಕಿಗೆ ಆಸರೆಯಾದರು ಎಂದು ತಹಸೀಲ್ದಾರ್ ಕೆ.ಮಂಜುನಾಥ್ ಹೇಳಿದರು.

ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ವಾತನಾಡಿದರು.

ಉಪನ್ಯಾಸಕ ಹನುಮಂತ ನಾಯಕ್ ಮಾತನಾಡಿ, ವಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ವಾಡಲಾಯಿತು. ಕನ್ನಡ ನಾಡಿನ ಏಕೀಕರಣ, ಸಾವಾಜಿಕ ಪರಿವರ್ತನೆ, ರಾಜ್ಯದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸವಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net