ನಾವು ಮಾಡಿದ ಯೋಜನೆ ಎಂದುಕೊಂಡೇ ಹಣ ಸಂಗ್ರಹಿಸಲು ಹೊರಟಿದೆ ಇಂದಿನ ಸರ್ಕಾರ: ಎಚ್​ಡಿಕೆ ಕಿಡಿ | HDK vs DKS

ನೇರವಾಗಿ ತಮ್ಮನ್ನು ಕುಟುಕಿದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ನಮ್ಮದು ಯಾವಾಗಲೂ ರೈತ ಪರ ನಿಲುವು, ರೈತರ ಹಿತಕ್ಕಾಗಿ ಹೋರಾಟ. ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸೋತಿದೆ, ರೈತರು ಈಗ ಸಂಕಷ್ಟದಲ್ಲಿ ಇದ್ದಾರೆ ಎಂದರು.
hdk vs dks
ನಾವು ಮಾಡಿದ ಯೋಜನೆ ಎಂದುಕೊಂಡೇ ಹಣ ಸಂಗ್ರಹಿಸಲು ಹೊರಟಿದೆ ಇಂದಿನ ಸರ್ಕಾರ: ಎಚ್​ಡಿಕೆ ಕಿಡಿ
Published on: 

ಮೈಸೂರು: ಬಿಡದಿ ಟೌನ್​ಶಿಪ್​ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇಂದು ಮೈಸೂರಿನಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಇಲ್ಲಿ ನನಗೆ ಪ್ರತಿಷ್ಠೆ ಇಲ್ಲ. ಕುಮಾರಸ್ವಾಮಿ ಜಾರಿಗೊಳಿಸಿದ ಯೋಜನೆಯನ್ನೇ ಮುಂದುವರೆಸುತ್ತಿದ್ದೇನೆ ಅಷ್ಟೇ ಎಂದು ನೇರವಾಗಿ ತಮ್ಮನ್ನು ಕುಟುಕಿದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ನಮ್ಮದು ಯಾವಾಗಲೂ ರೈತ ಪರ ನಿಲುವು, ರೈತರ ಹಿತಕ್ಕಾಗಿ ಹೋರಾಟ. ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸೋತಿದೆ, ರೈತರು ಈಗ ಸಂಕಷ್ಟದಲ್ಲಿ ಇದ್ದಾರೆ ಎಂದರು.

ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆಟ್ಟು ಮಾಡುವುದು ಬಿಟ್ಟು ಸ್ವಂತ ಸಂಪನ್ಮೂಲದಿಂದ ಪರಿಹಾರ ನೀಡಲಿ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ರಾಜ್ಯದ ಸಂಪನ್ಮೂಲದಿಂದಲೇ ನೆರವು ನೀಡಿದ್ದೇನೆ. ರಾಜ್ಯಾದ್ಯಂತ ಪಕ್ಷದ ವತಿಯಿಂದ ರೈತ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ರೈತರ ಜತೆ ನಾವಿದ್ದೇವೆ ಎಂದರು.

Also Read
ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಶ್​ ದರ್ಶನ್​ ವಿರುದ್ಧ ಇಂದು ಕೋರ್ಟ್​ನಲ್ಲಿ ಹೇಳಿದ್ದೇನು? | Actor Darshan
hdk vs dks

ನೈಸ್ ಟೋಲ್​ ಅಕ್ರಮ, ಬಿಡದಿ ಟೌನ್​ಶಿಪ್​ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ನಾವು ಮಾಡಿದ ಯೋಜನೆ ಎಂದು ಹೇಳಿಕೊಂಡು ಹಣ ಮಾಡಲು ಹೊರಟಿದೆ ಈಗಿನ ಸರ್ಕಾರ. ರೈತರು ಸಂಕಷ್ಟದಲ್ಲಿ ಇರುವಾಗ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಲಿ. ಮುಂದಿನ ದಿನಗಳಲ್ಲಿ ಈ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net