ಮಡಿವಾಳ: ಮಾಲೂರು ತಾಲೂಕು ತೊರ್ನಹಳ್ಳಿಯಲ್ಲಿ ಶ್ರೀ ದ್ರೌಪದಾಂಬಾ ಹಾಗೂ ಶ್ರೀ ಧರ್ಮರಾಯ Karaga ಸ್ವಾಮಿಯ 60ನೇ ಹಸಿಕರಗ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಅಂಗವಾಗಿ ದೇವಾಲಯಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಕರಗದ ಪೂಜಾರಿಗಳಾದ ಮಾರೇಶ್, ರಾಮಕೃಷ್ಣಪ್ಪ, ಶ್ರೀನಿವಾಸ್ ಅವರು ಹಸಿಕರಗ ಕೈಯಲ್ಲಿಡಿದು ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡಿದರು. ಕರಗಕ್ಕೆ ಮಲ್ಲಿಗೆ ಹೂವು ಅರ್ಪಿಸುವ ಮೂಲಕ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ವೀರಕುಮಾರರು ಕತ್ತಿಗಳನ್ನು ಹಿಡಿದು ಗೋವಿಂದ ನಾಮಸ್ಮರಣೆ ಮಾಡುತ್ತ ಹೆಜ್ಜೆ ಹಾಕಿದರು.
ಟಿ.ಎಂ.ರೋಜಾ ರಾಜಪ್ಪ, ಚಿನ್ನಪ್ಪ, ಶಂಕರ್, ಆನಂದ್, ಕುಲದ ಗೌಡರು, ಯಜಮಾನರು ವೀರಕುಮಾರರು, ಸೇರಿ ತೊರ್ನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಭಾಗವಹಿಸಿದ್ದರು.