ರಾಮಲಿಂಗಾರೆಡ್ಡಿ ಅವರ ಜತೆ ಶುಕ್ರವಾರ ತಡರಾತ್ರಿವರೆಗೂ ಸಮಾಲೋಚನೆ ನಡೆಸಿದ ಬಳಿಕ ಖಾಸಗಿ ಹೊಟೇಲ್ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಅದೇ ಖಾತೆಯಲ್ಲೇ ಮುಂದುವರೆಯುತ್ತಾರೆಯೇ ಎಂದು ಕೇಳಿದಾಗ, "ನಾವು ಖಾತೆ ವಿಚಾರವಾಗಿ ಏನು ಮಾತನಾಡಿದ್ದೇವೆ, ಬೇರೆ ಯಾವ ವಿಚಾರ ಮಾತನಾಡಿದ್ದೇವೆ ಎಂದೆಲ್ಲಾ ಮಾಧ್ಯಮಗಳ ಮುಂದೆ ಹೇಳಲು ಆಗುತ್ತದೆಯೇ?" ಎಂದು ಮರುಪ್ರಶ್ನಿಸಿದರು.ಇಂತಹ ಬೆಳವಣಿಗೆಗಳ ಬಗ್ಗೆ ಕೇಳಿದಾಗ, "ಇದೆಲ್ಲಾ ಆಗುತ್ತಾ ಇರಬೇಕು. ಮಳೆ, ಗುಡುಗು, ಸಿಡಿಲು, ಸೂರ್ಯ ಮುಳುಗುವುದು, ಹುಟ್ಟುವುದು ಸಹಜ" ಎಂದು ಹೇಳಿದರು.