ಸಾಹಿತ್ಯ ಕ್ಷೇತ್ರಕ್ಕೆ ಹಾರಕೂಡ ಮಠದ ಕೊಡುಗೆ ಅನನ್ಯ

ಬಸವಕಲ್ಯಾಣ  ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ, ಸಾಹಿತಿ ಬಸವರಾಜ ಐನೋಳಿ ಅವರ ಅಭಿನಂದನಾ ಗ್ರಂಥ ಮೃದುವಚನ ಲೋಕಾರ್ಪಣೆ ಸಮಾರಂಭದಲ್ಲಿ ಐನೋಳಿ ದಂಪತಿಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವದಿಸಿದರು. ಡಾ.ರಾಜಶೇಖರ ಮಠಪತಿ(ರಾಗಂ), ಮಲ್ಲಿನಾಥ ಹಿರೇಮಠ, ಬಿ.ಕೆ ಹಿರೇಮಠ, ಸುಭಾಷಚಂದ್ರ ನಾಗರಾಳೆ, ಮೇರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ  ಇತರರಿದ್ದರು.
ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ, ಸಾಹಿತಿ ಬಸವರಾಜ ಐನೋಳಿ ಅವರ ಅಭಿನಂದನಾ ಗ್ರಂಥ ಮೃದುವಚನ ಲೋಕಾರ್ಪಣೆ ಸಮಾರಂಭದಲ್ಲಿ ಐನೋಳಿ ದಂಪತಿಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವದಿಸಿದರು. ಡಾ.ರಾಜಶೇಖರ ಮಠಪತಿ(ರಾಗಂ), ಮಲ್ಲಿನಾಥ ಹಿರೇಮಠ, ಬಿ.ಕೆ ಹಿರೇಮಠ, ಸುಭಾಷಚಂದ್ರ ನಾಗರಾಳೆ, ಮೇರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಡಾ.ರಾಜಶೇಖರ ಮಠಪತಿ ಬಣ್ಣನೆ
  • ಅಭಿನಂದನಾ ಗ್ರಂಥ ಮೃದುವಚನ ಲೋಕಾರ್ಪಣೆ
ಬಸವಕಲ್ಯಾಣ: ಸಾಹಿತ್ಯ ಮತ್ತು ಸಾಂಸತಿಕ ೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಹಾರಕೂಡ ಮಠ ಸರ್ವ ಸಮುದಾಯದ ಭಕ್ತರು ಧಾರ್ಮಿಕ, ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಅರಳಲು ಪೂರಕ ಪರಿಸರ ಕಲ್ಪಿಸಿಕೊಡುವ ಭಕ್ತರ ಬೃಂದಾವನವಾಗಿದೆ ಎಂದು ಬೆಂಗಳೂರಿನ ಕವಿ, ಚಿಂತಕ ಡಾ.ರಾಜಶೇಖರ ಮಠಪತಿ(ರಾಗಂ) ಬಣ್ಣಿಸಿದರು.
ಹಾರಕೂಡ ಶ್ರೀಮಠದಲ್ಲಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶುಕ್ರವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ, ಸಾಹಿತಿ ಬಸವರಾಜ ಐನೋಳಿ ಚಿಂಚೋಳಿ ಅವರ ಅಭಿನಂದನಾ ಗ್ರಂಥ ಮೃದುವಚನ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಎಲ್ಲ ಆಯಾಮಗಳಲ್ಲಿ ಸಾತ್ವಿಕ ಪರಿವರ್ತನೆ ಬಯಸುವ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಮಾಜದ ಉನ್ನತಿಗೆ ವಿಶೇಷವಾಗಿ ಶಿಕ್ಷಣ ೇತ್ರಕ್ಕೆ ಅನುಪಮ ಕೊಡುಗೆ ನೀಡುತ್ತಿರುವದು ಶ್ಲಾನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿಯಾದ ಬಸವರಾಜ ಐನೋಳಿ ಅವರ ಕುರಿತಾಗಿ ಅಭಿನಂದನಾ ಗ್ರಂಥ ಮೃದುವಚನ ತಮ್ಮ ಮಠದಿಂದ ಪ್ರಕಟಿಸಿ ಲೋಕಾರ್ಪಣೆ ಮಾಡುತ್ತಿರುವುದು ಪೂಜ್ಯರು ಶಿಕ್ಷಕ ಸಮುದಾಯದ ಮೇಲೆ ಇಟ್ಟಿರುವ ಅಪಾರ ಪ್ರೀತಿ ಮತ್ತು ಗೌರವಕ್ಕೆ ದೊಡ್ಡ ನಿದರ್ಶನವಾಗಿದೆ. ಸಾಹಿತ್ಯ ಓದಿನಿಂದ ಸಂತೃಪ್ತಿ ಲಭಿಸುತ್ತದೆ. ಐನೋಳಿ ಅವರ ಸೇವೆ ಹಿರಿದಾದಷ್ಟು ಬದುಕು ಸಾರ್ಥಕವಾಗುತ್ತದೆ ಎಂದರು.
ಈ ಕೃತಿಯ ಪ್ರಧಾನ ಸಂಪಾದಕ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿಕೆ ಹಿರೇಮಠ, ಮೇರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ವಿಜಯಕುಮಾರ ಸಂಗೋಳಗೆ ಇದ್ದರು. ಅಂಬರಾಯ ಉಗಾಜಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ ಮತ್ತು ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಕುಮಾರಿ ವಿದ್ಯಾಶ್ರೀ ಕಲ್ಲೂರ ಭಾರತ ನಾಟ್ಯ ಪ್ರದರ್ಶನ ಮಾಡಿದರು. ಐನೋಳಿ ದಂಪತಿಗಳಿಗೆ ಹಾರಕೂಡ ಶ್ರೀಗಳು ಚಿನ್ನದ ಉಂಗುರವನ್ನಿಟ್ಟು ಸತ್ಕರಿಸಿ ಆಶೀರ್ವಾದಿಸಿದರು.
"

ಬಸವರಾಜ ಐನೋಳಿ ಅವರು ಶಿಕ್ಷಣದ ಜತೆಗೆ ಸಾಹಿತ್ಯ ಕ್ಷೇತ್ರಕ್ಕೆ 17 ಮೌಲ್ಯಿಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹಾರಕೂಡ ಮಠವು ಧಾರ್ಮಿಕ, ಆಧ್ಯಾತ್ಮಿಕದ ಜತೆಗೆ 108 ಮೌಲಿಕ ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದೆ. ಸಾಹಿತಿಗಳನ್ನು, ಕವಿ&ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಠದಿಂದ ನಡೆಯುತ್ತಿದೆ.

— > ಡಾ.ಗವಿಸಿದ್ದಪ್ಪ ಪಾಟೀಲ್​ ಸಾಹಿತಿ


"

ಶಿಕ್ಷಕನಾಗಿ ಸೇವೆ ಸಲ್ಲಿಸಿದ ನನ್ನ ಸಾಹಿತ್ಯ ಸೇವೆಯನ್ನು ಗುರುತಿಸಿ ಹಾರಕೂಡ ಮಠದಿಂದ ಅಭಿನಂನಾ ಗ್ರಂಥ ಪ್ರಕಟಿಸಿರುವುದು ನನಗೆ ಖುಷಿ ತಂದಿದೆ. ಡಾ.ಗವಿಸಿದ್ದಪ್ಪ ಪಾಟೀಲ್​ ಸಂಪಾದತ್ವಕದಲ್ಲಿ ಅಭಿನಂದನಾ ಗ್ರಂಥ ಪ್ರಕಟವಾಗಿದೆ. ಹಾರಕೂಡ ಮಠದ ದಾಸೋಹದ ಜತೆಗೆ ಸಾಹಿತ್ಯ ೇತ್ರಕ್ಕೆ ನೀಡುತ್ತಿರುವ ಕೊಡುಗೆ ದೊಡ್ಡದು.

— > ಬಸವರಾಜ ಐನೋಳಿ ನಿವೃತ್ತ ಶಿಕ್ಷಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net