ಬೆಂಗಳೂರು ಉತ್ಸವದಲ್ಲಿ ಗಮನ ಸೆಳೆಯುತ್ತಿವೆ ಕರಕುಶಲ ಉತ್ಪನ್ನಗಳು- Bangalore festival

ವಿ.ಜೆ.ಹೇಮಲತಾ
ವಿ.ಜೆ.ಹೇಮಲತಾ
Published on

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ (ಸಿಕೆಪಿ) ಆಯೋಜಿಸಲಾಗಿರುವ ಕಲೆ, ಕರಕುಶಲ, ಕೈಮಗ್ಗ ಹಾಗೂ ಜೀವನಶೈಲಿ ಉತ್ಪನ್ನಗಳ ವೈವಿಧ್ಯಮಯ ಪ್ರದರ್ಶನವಾಗಿರುವ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್‌ನ ಬೆಂಗಳೂರು ಉತ್ಸವಕ್ಕೆ ಚಾಲನೆ ನೀಡಿದರು.

ವಿ.ಜೆ.ಹೇಮಲತಾ ಉದ್ಘಾಟಿಸಿ ಮಾತನಾಡಿ, ಬೆಂಗಳೂರು ಕಲೆ, ಸಂಸ್ಕೃತಿ ಮತ್ತು ಕರಕುಶಲ ಪರಂಪರೆಗೆ ಸದಾ ಉತ್ತಮ ಪ್ರೋತ್ಸಾಹ ನೀಡುತ್ತಾ ಬಂದಿದೆ. ಬೆಂಗಳೂರು ಉತ್ಸವದಂತಹ ಕಾರ್ಯಕ್ರಮಗಳು ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ಉತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರಿಗೆ ವೈವಿಧ್ಯಮಯ ಹಾಗೂ ವಿಶಿಷ್ಟ ವಸ್ತುಗಳನ್ನು ಪರಿಚಯಿಸುವ ಅವಕಾಶವನ್ನು ನೀಡುತ್ತವೆ ಎಂದರು.
ವಿವಿಧ ಕಲಾವಿದರು, ಕುಶಲಕರ್ಮಿಗಳು, ವಿನ್ಯಾಸಕರು ಹಾಗೂ ಉದ್ಯಮಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿರುವ ಈ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಕರಕುಶಲ ವಸ್ತುಗಳಿಂದ ಹಿಡಿದು ಆಧುನಿಕ ಜೀವನಶೈಲಿಗೆ ಹೊಂದುವ ಉತ್ಪನ್ನಗಳವರೆಗೆ ವೈವಿಧ್ಯಮಯ ವಸ್ತುಗಳನ್ನು ಕಾಣಬಹುದಾಗಿದೆ.
90ಕ್ಕೂ ಹೆಚ್ಚು ಶಾಪಿಂಗ್ ಮಳಿಗೆಗಳು ಮತ್ತು 50ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ತಮ್ಮ ವಿಶಿಷ್ಟ ಉತ್ಪನ್ನಗಳು ಮತ್ತು ಸೃಜನಶೀಲ ಕೃತಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಿದ್ದಾರೆ. ಗ್ರಾಹಕರು ನೇರವಾಗಿ ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸಿ, ವಿಭಿನ್ನ ಹಾಗೂ ವಿಶಿಷ್ಟ ಉತ್ಪನ್ನಗಳನ್ನು ಖರೀದಿಸುವ ಅವಕಾಶವನ್ನು ಈ ಉತ್ಸವ ಒದಗಿಸುತ್ತದೆ.
ಸೆ.6ರವರೆಗೆ ನಡೆಯಲಿರುವ ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ನಗರದ ಜನರು ಕುಟುಂಬ ಸಮೇತರಾಗಿ ಭೇಟಿ ನೀಡಿ ವಿವಿಧ ಕಲಾಕೃತಿಗಳು, ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು ಹಾಗೂ ಜೀವನಶೈಲಿ ವಸ್ತುಗಳನ್ನು ವೀಕ್ಷಿಸಿ ಖರೀದಿಸಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net