ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ, ಸರ್ಕಾರ ಮೊಟ್ಟೆಗೆ 6 ರೂ. ನಿಗದಿ ಮಾಡಿದೆ. ಪ್ರಸ್ತುತ ಮಾರುಕಟ್ಟೆ ದರ 8 ರೂ. ತಲುಪಿದೆ. ಇದರಿಂದ ಶಿಕ್ಷಕರು ಜೇಬಿನಿಂದ ಭರಿಸುವಂತಾಗಿದೆ.
ಆದ್ದರಿಂದ ಆರ್ಥಿಕ ಹೊರೆ ತಪ್ಪಿಸಬೇಕು, ಇಲ್ಲವಾದರೆ ಏಜೆನ್ಸಿಗೆ ಮೊಟ್ಟೆ ಪೂರೈಕೆಗೆ ಗುತ್ತಿಗೆ ನೀಡಬೇಕೆಂದು ಮನವಿ ಮಾಡಿದರು. ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಹಣ ಭರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.