ಇತಿಹಾಸ ಪುಟದಲ್ಲಿ ಅಜರಾಮರವಾಗಿ ಹೊರ ಹೊಮ್ಮಿರುವ ವಿಜಯನಗರ ಸಾಮ್ರಾಜ್ಯದ ಚರಿತ್ರೆ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಶ್ರೀಕೃಷ್ಣದೇವರಾಯ ಆಡಳಿತ, ನಾಡಪ್ರೇಮ ಸೇರಿದಂತೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಅವರ ನಾಟಕ ಪ್ರದರ್ಶನ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ಹಂಪಿ ದೇಶಕ್ಕೆ ಆಡಳಿತ, ಕಲೆ, ವಾಸ್ತುಶಿಲ್ಪದಂತಹ ಮಹತ್ವದ ಕೊಡುಗೆ ನೀಡಿದೆ. ಕಾಲೇಜು ದಿನಗಳಲ್ಲಿ ರಂಗಭೂಮಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತಿರುವುದು ಅತ್ಯುತ್ತಮ ಕಾರ್ಯ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಹಾಗೂ ಎನ್‌ಎಸ್‌ಎಸ್ ಸಂಯೋಜಕ ಪ್ರೊ.ಭೋಜರಾಜ ಎಸ್., ದುರಗೇಶ್, ಮಹಾಂತೇಶ್, ಶಂಕರ್, ಸುರೇಶ, ವೀಣಾ, ರತ್ನಾ, ಸಕ್ಕುಬಾಯಿ ಕಬಾಡಿ, ಪ್ರಶಾಂತ, ಶಿವಕುಮಾರ್, ಸೋಮಶೇಖರ್, ಶಿವರಾಜ್ ಕೋಳೂರು ಇದ್ದರು.