ರಾತ್ರಿಯಿಡೀ ಜಾನಪದ, ರಾಕ್, ಫ್ಯೂಷನ್, ಹಿಂದುಸ್ತಾನಿ ಸಂಗೀತ, ಸಮೂಹ ನೃತ್ಯ, ಭರತನಾಟ್ಯ ಹಾಗೂ ಬಯಲಾಟಗಳು ನಡೆದವು. ಮಹಾಶಿವರಾತ್ರಿ ಇರುವುದರಿಂದ ಭಕ್ತರಿಗಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಮರುದಿನ ಬೆಳಗ್ಗೆಯವರೆಗೆ ಅಹೋರಾತ್ರಿ ಕಾರ್ಯಕ್ರಮಗಳು ಮುಂದುವರಿದವು. ವಿವಿಧ ಕಡೆಗಳಿಂದ ಬಂದಿದ್ದ ಅಸಂಖ್ಯ ಭಕ್ತರು ವಿರೂಪಾಕ್ಷೇಶ್ವರನ ದರ್ಶನ ಪಡೆದು, ರಾತ್ರಿಯಿಡೀ ಶಿವನಾಮ ಸ್ಮರಣೆ ಮಾಡಿದರು.