ಜಾಗತಿಕ ಸವಾಲುಗಳ ನಡುವೆಯೂ ಲಾಭದತ್ತ ಎಚ್‌ಎಎಲ್

ಎಚ್‌ಎಎಲ್ ನಲ್ಲಿ ನಿರ್ಮಾಣಗೊಂಡಿರುವ ಯುದ್ಧವಿಮಾನ ಮತ್ತು ಹೆಲಿಕಾಪ್ಟರ್‌ ಬಿಡಿಭಾಗಗಳ ಮುಂದೆ ತಜ್ಞರ ತಂಡ.
ಎಚ್‌ಎಎಲ್ ನಲ್ಲಿ ನಿರ್ಮಾಣಗೊಂಡಿರುವ ಯುದ್ಧವಿಮಾನ ಮತ್ತು ಹೆಲಿಕಾಪ್ಟರ್‌ ಬಿಡಿಭಾಗಗಳ ಮುಂದೆ ತಜ್ಞರ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಜಾಗತಿಕ ಸವಾಲುಗಳ ನಡುವೆಯೂ ಲಾಭದತ್ತ ಎಚ್‌ಎಎಲ್
  • 2025-26ನೇ ಹಣಕಾಸು ವರ್ಷದಲ್ಲಿ ₹32,250 ಕೋಟಿ ಆದಾಯ
  • ಬಾಹ್ಯಾಕಾಶ ಮತ್ತು ನಾಗರೀಕ ಕ್ಷೇತ್ರಕ್ಕೂ ಪಾದಾರ್ಪಣೆ

ಬೆಂಗಳೂರು:ದೇಶದ ಪ್ರಮುಖರಕ್ಷಣಾ ಮತ್ತು ವಾಯುಯಾನ ಸಂಸ್ಥೆಯಾದಹಿಂದೂಸ್ಥಾನ್ ಏರೋನಾಟಿಕ್ಸೃ್ಲಿಮಿಟೆಡ್ (ಎಚ್‌ಎಎಲ್) 2025-26ನೇ ಹಣಕಾಸುವರ್ಷದಲ್ಲಿ ₹32,250ಕೋಟಿ ಆದಾಯಗಳಿಸಿದೆ. ಕಳೆದವರ್ಷ ₹30,981 ಕೋಟಿಇದ್ದ ಆದಾಯ ಹಲವು ಜಾಗತಿಕ ಸವಾಲುಗಳನಡುವೆಯೂ ಏರಿಕೆಯಾಗಿದೆ.

ರಾಜಕೀಯಉದ್ವಿಗ್ನತೆ,ಯುದ್ಧದ ಸಂಕಷ್ಠ,ರಫ್ತು-ಆಮದುಗಳವ್ಯತ್ಯಾಸದ ನಡುವೆಯೂ ಎಚ್‌ಎಎಲ್ತನ್ನ ಸ್ಥಿರತೆ ಕಾಯ್ದುಕೊಂಡಿದ್ದು,ವಿಮಾನ,ಹೆಲಿಕಾಪ್ಟರ್‌ಗಳತಯಾರಿಕೆ ಹಾಗೂ ಇತರೆ ರಾಷ್ಟ್ರಗಳಿಗೆವಿತರಣೆ ಮಾಡುವ ವೇಗವನ್ನು ಹೆಚ್ಚಿಸಿಕೊಂಡಿದೆ.

ಮಾ.31ರವರೆಗಿನ ಎಚ್‌ಎಎಲ್ ಆದೇಶ ಪುಸ್ತಕವು2.54 ಲಕ್ಷಕೋಟಿ ರೂಪಾಯಿಗೆ ಏರಿಕೆಯಾಗಿದ್ದು,ಹಿಂದಿನ ಆರಂಭಿಕಮಟ್ಟ 1.89 ಲಕ್ಷಕೋಟಿಯಾಗಿತ್ತು.ರಕ್ಷಣಾ ಸಚಿವಾಲಯದಿಂದಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳಖರೀದಿಗೆ ಆರ್ಡರ್ ಕೊಟ್ಟಿರುವುದುಇದಕ್ಕೆ ಪ್ರಮುಖ ಕಾರಣ.ಇದರಿಂದ ಮುಂದಿನ7-8 ವರ್ಷಗಳವರೆಗೆ ಕಂಪನಿಯ ಆದಾಯ ಸ್ಥಿರವಾಗಿಮುಂದುವರೆಯಲಿದೆ ಎಂದು ಸಂಸ್ಥೆಯಚೇರ್ಮನ್ ಡಿ.ಕೆ.ಸುನೀಲ್ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಗರಿಕವಲಯಕ್ಕೆ ಎಚ್‌ಎಎಲ್ ಪ್ರವೇಶ

ಎಚ್‌ಎಎಲ್ನಾಗರಿಕ ವಿಮಾನಯಾನ ಕ್ಷೇತ್ರಕ್ಕೂಕಾಲಿಟ್ಟಿದ್ದು,ದ್ರುವ್ ಎನ್‌ಜಿಹೆಲಿಕಾಪ್ಟರ್‌ನ ಮೊದಲ ಹಾರಾಟಯಶಸ್ವಿಯಾಗಿದೆ.ಹಾಗೂ ಎಚ್‌ಟಿಟಿ-40ತರಬೇತಿ ವಿಮಾನವೂಮೊದಲ ಹಾರಾಟವನ್ನು ಯಶಸ್ವಿಯಾಗಿಪೂರ್ಣಗೊಳಿಸಿದೆ.ಮಹಾರಾಷ್ಟ್ರದನಾಸಿಕ್‌ನಲ್ಲಿರುವ ಎಚ್‌ಎಎಲ್ಘಟಕದಲ್ಲಿ ಇವುಗಳ ಉತ್ಪದನಾ ಕಾರ್ಯನಡೆಯುತ್ತಿದೆ.ಮಿಶ್ರಧಾತುನಿಗಮ ಲಿ. ಜೊತೆಒಪ್ಪಂದ ಮಾಡಿಕೊಂಡು ಪ್ರಮುಖ ಲೋಹಸಂಗ್ರಹ ಕೇಂದ್ರ ಸ್ಥಾಪನೆಗೆಸಂಸ್ಥೆ ಮುಂದಾಗಿದೆ.ಜಾಗತಿಕವಾಗಿಹಲವು ದೇಶಗಳ ಜೊತೆ ಕೂಡಾ ವಿವಿಧಒಪ್ಪಂದಗಳನ್ನು ಮಾಡಿಕೊಂಡಿದ್ದು,ಬಾಹ್ಯಾಕಾಶಕ್ಷೇತ್ರದಲ್ಲೂ ತನ್ನ ಕಾರ್ಯವಿಸ್ತರಿಸಿದೆ.ಸಂಸ್ಥೆಯ ಲಾಭದಲ್ಲಿಪರಿಸರ ಸಂರಕ್ಷಣೆ ಮತ್ತಿತರಸಿಎಸ್‌ಆರ್ ಕಾರ್ಯಗಳನ್ನುಜವಾಬ್ದಾರಿಯುತವಾಗಿ ಮುಂದುವರೆಸಿದೆ.

ಜಾಗತಿಕ ಸವಾಲುಗಳ ನಡುವೆಯೂ ಎಚ್‌ಎಎಲ್ ತನ್ನ ಸಾಮರ್ಥ್ಯದೊಂದಿಗೆ ಸ್ಥಿರ ಬೆಳವಣಿಗೆಯನ್ನು ಸಾಧಿಸಿದೆ. ಕಂಪನಿಯ ಆರ್ಡರ್ ಪುಸ್ತಕದ ಗಾತ್ರ ಮತ್ತಷ್ಟು ದೊಡ್ಡದಾಗಿದ್ದು, ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿಕೊಂಡು ನಾಗರಿಕ ವಲಯಕ್ಕೂ ಪ್ರವೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net