ರಾಜ್ಯದ ಹಲವೆಡೆ 5 ದಿನ ಆಲಿಕಲ್ಲು ಮಳೆ- Moderate rain

ಆಲಿಕಲ್ಲು ಮಳೆ
ಆಲಿಕಲ್ಲು ಮಳೆ
Published on
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ತೇವಾಂಶ ಭರಿತ ಮೋಡಗಳಿರುವ ಕಾರಣ ರಾಜ್ಯದ ಹಲವೆಡೆ ಮಂಗಳವಾರವೂ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಯಿತು. 
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಕೊಡಗು,ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬಾಗಲಕೋಟೆ, ರಾಯಚೂರು, ವಿಜಯಪುರ, ಬಳ್ಳಾರಿ ಮತ್ತು ವಿಜಯನಗರದ ವ್ಯಾಪ್ತಿಯ ಪ್ರದೇಶಗಳಲ್ಲಿ ವರ್ಷಧಾರೆಯಾಯಿತು. 
ಕೆಲವು ಪ್ರದೇಶಗಳಲ್ಲಿ ರಾಶಿರಾಶಿ ಆಲ್ಲಿಕಲ್ಲು ಬಿದ್ದು ಜನರು ಪುಳಕಿತಗೊಂಡರು. ಹಲವು ಮನೆಗಳಿಗೆ ನೀರು ನುಗ್ಗಿತ್ತು. ದ್ವಿಚಕ್ರವಾಹನಗಳು ಮುಳುಗಡೆಯಾದವು. ಮೋಡ ಕವಿದ ವಾತಾವರಣ, ಮಳೆಯಿಂದ ಏರಿಕೆಯಾಗಿದ್ದ ತಾಪಮಾನ ತುಸು ಇಳಿಮುಖವಾಗಿದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ತಂಪು ವಾತಾವರಣ ಅನುಭವವಾಗುತ್ತಿದೆ. 
ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು,ಚಾಮರಾಜನಗರ, ಬೆಂಗಳೂರುನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು  ವಿಜಯಪುರ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಾ.18ರಿಂದ ಮಾ.22ರವರೆಗೆ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. 
ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ ಗುಡುಗು,ಮಿಂಚು ಸಹಿತ ಆಲಿಕಲ್ಲು ಮಳೆ ಬರಲಿದೆ. ರಾಜ್ಯದಲ್ಲಿ  ವಾರಪೂರ್ತಿ ಅಲ್ಲೆಲ್ಲಿ ಮಳೆಯಾಗಲಿದೆ. ಮಳೆ ಅವಧಿ 15 ಅಥವಾ 30 ನಿಮಿಷ ಇದ್ದರೂ ಅದರ ತೀವ್ರತೆ ಜಾಸ್ತಿ ಇರಲಿದೆ. ಗುಡುಗು,ಮಿಂಚು ಸಹಿತ ಮಳೆ ಬರುವ ಮುನ್ಸೂಚನೆ ಇದ್ದಾಗ ರೈತರು, ಕುರಿಗಾಹಿಗಳು ಯಾವುದೇ ಕಾರಣಕ್ಕೂ ಮರ, ವಿದ್ಯುತ್ ತಂತಿ ಹಾದುಹೋಗಿರುವ ಮಾರ್ಗದ ಕೆಳಗಡೆ ಮತ್ತು ನೀರಿನ ಸಮೀಪ ನಿಂತುಕೊಳ್ಳಬಾರದು. 
 ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net