ಕಣಕಟ್ಟೆ ಗ್ರಾಮದ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯ ಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕೀರ್ತಿ, ಮಾಗೇನಳ್ಳಿ ಮಹೇಶ, ಕಣಕಟ್ಟೆ ಪ್ರಶಾಂತ, ಶಿವಕುಮಾರ, ಕೃಷ್ಣ, ಕುಮಾರ, ಮಲ್ಲಿಕಾರ್ಜುನ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಣಕಟ್ಟೆ ಗ್ರಾಮದ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆ
ಗುರುವಂದನಾ ಕಾರ್ಯಕ್ರಮ
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಗ್ರಾಮದ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ 1995-96ನೇ ಸಾಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರು ಪಾಲ್ಗೊಂಡು ಶಿಷ್ಯವೃಂದಕ್ಕೆ ಮತ್ತೊಮ್ಮೆ ಆಶೀರ್ವಾದ ಮಾಡಿದರು. ಇದೇ ವೇಳೆ ವಿದ್ಯಾರ್ಥಿಗಳು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಿವೃತ್ತ ಶಿಕ್ಷಕ ಎಸ್.ಬಿ.ನಂಜುಂಡಪ್ಪ ಮಾತನಾಡಿ, ಅಪರೂಪದ ಸಂಗಮಕ್ಕೆ ಕಾರಣರಾದ 1996ನೇ ಸಾಲಿನ ವಿದ್ಯಾರ್ಥಿಗಳು ಹಿಂದಿನ ನೆನಪನ್ನು ಮುನ್ನೆಲೆಗೆ ತಂದಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ಜಿ.ಎನ್.ಈಶ್ವರಪ್ಪ ಮಾತನಾಡಿ, 30 ವರ್ಷಗಳ ನಂತರ ಎಲ್ಲರನ್ನೂ ಭೇಟಿ ಮಾಡುತ್ತಿರುವುದು ಸಾರ್ಥಕವಾಗಿದೆ ಎಂದು ಭಾವುಕರಾಗಿ ಹೇಳಿದರು.
ಜಿ.ಎನ್.ರಾಜಪ್ಪ, ಜಿ.ಎಸ್.ಹಾಲಪ್ಪ, ಶಿವಣ್ಣ ಮಾಸ್ಟರ್ ಮಾತನಾಡಿದರು. ಸಮಾರಂಭ ಆಯೋಜನೆಗೆ ಕಾತಣಕರ್ತರಾದ ಕೀರ್ತಿ, ಮಾಗೇನಳ್ಳಿ ಮಹೇಶ, ಕಣಕಟ್ಟೆ ಪ್ರಶಾಂತ ಅವರ ಕಾರ್ಯವನ್ನು ಶ್ಲಾಘಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಕುಮಾರ, ಕೃಷ್ಣ, ಕುಮಾರ, ಮಲ್ಲಿಕಾರ್ಜುನ ಇತರರಿದ್ದರು.