ಅಕ್ರಮ, ಅವ್ಯವಸ್ಥೆ ಗೂಡಾದ ಗುಬ್ಬೇವಾಡ

ಇಂಡಿ ತಾಲೂಕು ಪಂಚಾಯಿತಿಗೆ ಗುಬ್ಬೇವಾಡ ಗ್ರಾಮಸ್ಥರು ಮನವಿ ಸಲ್ಲಿಸಿದರು. ಮಹೇಂದ್ರ ಬನ್ನೆ, ಬೀರು ಕವಡಿ, ಮೋಹನ ತೇಲಿ, ಮಾದು ಆಲೂರ ಇತರರಿದ್ದಾರೆ.
ಇಂಡಿ ತಾಲೂಕು ಪಂಚಾಯಿತಿಗೆ ಗುಬ್ಬೇವಾಡ ಗ್ರಾಮಸ್ಥರು ಮನವಿ ಸಲ್ಲಿಸಿದರು. ಮಹೇಂದ್ರ ಬನ್ನೆ, ಬೀರು ಕವಡಿ, ಮೋಹನ ತೇಲಿ, ಮಾದು ಆಲೂರ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ
  • ಗರಸು ಹಾಕುವ ಅನುದಾನ ದುರ್ಬಳಕೆ
ಇಂಡಿ: ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಹಾಗೂ ಶಾಲೆ ಆವರಣದಲ್ಲಿ ಗರಸು ಹಾಕುವ ಉದ್ದೇಶಕ್ಕೆ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡ ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹಿಸಿ ಗುಬ್ಬೇವಾಡ ಗ್ರಾಮಸ್ಥರು ಮಂಗಳವಾರ ತಾಲೂಕು ಪಂಚಾಯಿತಿ ಇಒಗೆ ಮನವಿ ಸಲ್ಲಿಸಿದರು.

ಗುಬ್ಬೇವಾಡ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಕುರಿತು ಸ್ಥಳೀಯ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಇನ್ನು ಮಳೆಗಾಲ ಆರಂಭ ಹಿನ್ನೆಲೆ ಶಾಲೆ ಆವರಣದಲ್ಲಿ ಗರಸು ಹಾಕಲು ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಕುರಿತು ವಿಚಾರಿಸಿದರೆ ಸಕಾರಾತ್ಮಕವಾಗಿ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳದೇ ಹೋದರೆ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮಸ್ಥರಾದ ರಾಬಕ್ಸರ ಕಸಾಯಿ, ಮಹೇಂದ್ರ ಬನ್ನೆ, ಬೀರು ಕವಡಿ, ಮೋಹನ ತೇಲಿ, ಮಾದು ಆಲೂರ, ಅಮೃತ ಮರಗೂರ, ಆನಂದಗೌಡ ಚಾಂದಕವಟೆ, ಶಾಮರಾಯ ಪೂಜಾರಿ, ಹಸನಸಾಬ ಕಸಾಯಿ, ಪರಮೇಶ್ವರ ಆಲೂರ, ಅಲ್ಲಾಭಕ್ಷ ದೇವಣಗಾಂವ, ರಾಘವೇಂದ್ರ ಖೈರಾವ, ಅನೀಲ ಉಪ್ಪಿನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net