ಸಮಾನ ಜೀವನಕ್ಕೆ ಜಾರಿಯಾದ ಗ್ಯಾರಂಟಿ / HOSKOTE

ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಕಾಂತರಾಜ್​ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಚ್ಚೇಗೌಡ, ಜಿಲ್ಲಾ ಸಮಿತಿ ಸದಸ್ಯ ಹೇಮಣ್ಣ, ಸಮಿತಿ ಸದಸ್ಯರಾದ ಅಮ್ಜದ್​ ಬೇಗ್​, ಮಂಜುನಾಥ್​, ಬೇಟೇಗೌಡ, ಲಕ್ಷಿ$್ಮ ಇದ್ದರು.
ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಕಾಂತರಾಜ್​ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಚ್ಚೇಗೌಡ, ಜಿಲ್ಲಾ ಸಮಿತಿ ಸದಸ್ಯ ಹೇಮಣ್ಣ, ಸಮಿತಿ ಸದಸ್ಯರಾದ ಅಮ್ಜದ್​ ಬೇಗ್​, ಮಂಜುನಾಥ್​, ಬೇಟೇಗೌಡ, ಲಕ್ಷಿ$್ಮ ಇದ್ದರು.
Published on
ಹೊಸಕೋಟೆ : ಪಂಚ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಬಡ, ಮಧ್ಯಮ ವರ್ಗದವರ ಬದುಕು ಹಸನಾಗಿದೆ ಎಂದು ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜ್​ ಹೇಳಿದರು. ಸಮೇತನಹಳ್ಳಿ ಗ್ರಾಮ ಪಂಚಾಯಿತಿಯಿಂದ ಸೌಖ್ಯಾ ರಸ್ತೆಯ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಡ ಮಧ್ಯಮ ವರ್ಗದವರೂ ಹಸಿವಿನಿಂದ ಇರಬಾರದು. ಸಾಮಾಜಿಕ ಕ್ಷೇತ್ರದಿಂದ ದೂರ ಉಳಿಯಬಾರದು. ಸಮಾನತೆಯ ಜೀವನಕ್ಕಾಗಿ ಗ್ಯಾರಂಟಿ ಜಾರಿಗೊಳಿಸಲಾಗಿದೆ. ಸಮೇತನಹಳ್ಳಿ ಮಾರ್ಗವಾಗಿ ಚಿಕ್ಕತಿರುಪತಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಶಕ್ತಿ ಯೋಜನೆ ಪ್ರಗತಿಯಲ್ಲಿ ಕೊಂಚ ಹಿಂದಿದೆ. ಶೀಘ್ರವೇ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಚ್ಚೇಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ದೃಷ್ಟಿಯಿಂದ ಸರ್ಕಾರದಿಂದ ಗ್ರಾಪಂ ಮಟ್ಟದಲ್ಲಿ ಕುಂದು ಕೊರತೆ ಸಭೆ ನಡೆಸಲಾಗುತ್ತಿದೆ. ಶಾಸಕ ಶರತ್​ ಬಚ್ಚೇಗೌಡರ ಮಾರ್ಗದರ್ಶನದಲ್ಲಿ ಸಮಸ್ಯೆ ಆಲಿಸಿ ವರದಿ ನೀಡುವುದರ ಜತೆಗೆ ಸ್ಥಳದಲ್ಲೇ ಅಧಿಕಾರಿಗಳಿಂದ ಪರಿಹಾರಕ್ಕೆ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಇದರಿಂದ ಸೌಲಭ್ಯ ತಲುಪುವಲ್ಲಿ ಇರುವ ನ್ಯೂನತೆ ಪತ್ತೆಹಚ್ಚಲು ಸಾಧ್ಯ. ಗೃಹಜೋತಿ ಹಾಗೂ ಅನ್ನಭಾಗ್ಯದ ವಿಚಾರವಾಗಿ ದೂರುಗಳು ವ್ಯಾಪಕವಾಗಿ ಬಂದಿದ್ದು, ಸಮಿತಿ ತ್ವರಿತವಾಗಿ ಬಗೆಹರಿಸಲಿದೆ ಎಂದರು.
ಬೆಸ್ಕಾಂ ಜೆಇ ಸಂತೋಷ್​, ಆಹಾರ ಇಲಾಖೆ ಶಿರಸ್ತೆದಾರ್​ ಶಿವಕುಮಾರ್​, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸವಿತಾ, ಮಹಿಳಾ ಬ್ಲಾಕ್​ ಕಾಂಗ್ರೆಸ್​ ನಾಯಕಿ ಲತಾ ರೆಡ್ಡಿ, ಗ್ರಾಪಂ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net