ಪಾಲಕರು ತಮ್ಮ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಕಳುಹಿಸುವ ಮೂಲಕ ಪ್ರೋತ್ಸಾಹಿಸಬೇಕು. ಚನ್ನರಾಯಪಟ್ಟಣದ ಕಲಾ ಪರಿವಾರದ ನೂರು ಜನ ಕಲಾವಿದರಿಂದ ಸಮೂಹ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಉಪಸ್ಥಿತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ್ ಕೆದಿಲಾಯರು ವಹಿಸಲಿದ್ದು, ಬೆಂಗಳೂರಿನ ವೇದ ವಿದ್ವಾಂಸ ವಿರೂಪಾಕ್ಷ ದೀಕ್ಷಿತ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನಮ್ನ ಗೌರವಾಧ್ಯಕ್ಷ ಲೋಕೇಶ್ ಹೊನ್ನಾವರ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರೈಲ್ವೆ ಇಲಾಖೆಯ ನಿವೃತ್ತ ಉಪಯೋಜನ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯಂ ಆಗಮಿಸಲಿದ್ದು, ಕಾರ್ಯಕ್ರಮವು ನವೋದಯ ಕಾಲೇಜು ಆವರಣದಲ್ಲಿ ಸಂಜೆ 5 ಗಂಟೆಗೆ ಆರಂಭವಾಗಲಿದೆ. ದೇಶಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.