ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ

ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಇಲಾಖೆಯಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ನೆರವೇರಿಸಿದರು. ಡಾ. ಶಿವಯೋಗೇಪ್ಪ ಮಾಡ್ಯಾಳ, ಸಿದ್ಧೇಶ್ವರ ಸ್ವಾಮೀಜಿ ಗುರುದೇವಾಶ್ರಮದ ಸಂಗಮೇಶ್ವರ ಸ್ವಾಮೀಜಿಗಳು ಮತ್ತಿತರರಿದ್ದಾರೆ.
ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಇಲಾಖೆಯಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ನೆರವೇರಿಸಿದರು. ಡಾ. ಶಿವಯೋಗೇಪ್ಪ ಮಾಡ್ಯಾಳ, ಸಿದ್ಧೇಶ್ವರ ಸ್ವಾಮೀಜಿ ಗುರುದೇವಾಶ್ರಮದ ಸಂಗಮೇಶ್ವರ ಸ್ವಾಮೀಜಿಗಳು ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆ
  • ಭೂಮಿ ಪೂಜೆಗೆ ಚಾಲನೆ
ಇಂಡಿ: ತಾಲೂಕಿನಲ್ಲಿರುವ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸಲಾಗುತ್ತಿದ್ದು, ಮೂರಮೂಲಿ ತಾಂಡಾದಿಂದ ಸಾಲೋಟಗಿ ವರೆಗೆ 9.50 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಸಾಲೋಟಗಿ ಗ್ರಾಮದಲ್ಲಿ ಮೂರಮೂಲಿ ತಾಂಡಾದಿಂದ ಸಾಲೋಟಗಿ ವರೆಗೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಸಾತಲಗಾಂವದಿಂದ ನಾದ ಕೆಡಿ ಗ್ರಾಮದ ವರೆಗೆ 9.90 ಕೋಟಿ ರೂ., ಗೋಳಸಾರದಿಂದ ಮಿರಗಿ ವರೆಗೆ 5.60 ಕೋಟಿ ರೂ. ಮತ್ತು ರೂಗಿ ಕ್ರಾಸ್‌ನಿಂದ ತೆನೆಹಳ್ಳಿ ವರೆಗೆ 5.70 ಕೋಟಿ ರೂ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಇದ್ದಾಗ ಜಲಧಾರೆ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಿದೆ. ಬೇಸಿಗೆಯಲ್ಲಿ ಸಹ ತಾಲೂಕಿನ ಕೆರೆಗಳು ತುಂಬಿವೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ಮಾಡಬೇಕು. 2026 ಮುಂದಿನ 3 ತಿಂಗಳಲ್ಲಿ ರಸ್ತೆಗಳು ಸುಧಾರಣೆ ಮಾಡುತ್ತೇನೆ ಎಂದರು.
ಡಾ. ಶಿವಯೋಗೇಪ್ಪ ಮಾಡ್ಯಾಳ, ಸಾಲೋಟಗಿ ಸಿದ್ಧೇಶ್ವರ ಸ್ವಾಮೀಜಿ ಗುರುದೇವಾಶ್ರಮದ ಸಂಗಮೇಶ್ವರ ಸ್ವಾಮೀಜಿಗಳು ಮಾತನಾಡಿದರು. ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಾ.ಪಂ. ಅಧಿಕಾರಿ ಮಹಾದೇವಪ್ಪ ಏವೂರ, ಸಿಪಿಐ ಸುನೀಲ ಪಾಟೀಲ, ಲ್ಯಾಂಡ್ ಆರ್ಮಿ ಎಇ ರಾಜೇಶ್ ಹೂಗಾರ, ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಗೀತಾ ಗುತ್ತರಗಿಮಠ, ರಾಜ್ಯ ಲಿಂಬೆ ಅಭಿವೃದ್ಧಿ ಅಧ್ಯಕ್ಷ ಭೀಮಣ್ಣ ಕವಲಗಿ, ಶಿವಯೋಗೇಪ್ಪ ಚನಗೊಂಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net