ಹೂಗಾರ ಸಮಾಜ ಭವನ ನಿಮಾರ್ಣಕ್ಕೆ ಅನುದಾನ

ಕ್ಕಲಕೋಟದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ತಾಲೂಕು ಹೂಗಾರ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ, ಕಾಶಿನಾಥ ಗುರವ ಮಹಾರಾಜರು, ಶಾಸಕ ಸಚಿನ್​ ಕಲ್ಯಾಣಶೆಟ್ಟಿ, ಮಿಲನ್​ ಕಲ್ಯಾಣಶೆಟ್ಟಿ, ಅಂಜಲಿ ಬಾಜಾರಮಠ, ಗಣೇಶ ಫುಲಾರಿ ಇತರರಿದ್ದರು.
ಕ್ಕಲಕೋಟದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ತಾಲೂಕು ಹೂಗಾರ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ, ಕಾಶಿನಾಥ ಗುರವ ಮಹಾರಾಜರು, ಶಾಸಕ ಸಚಿನ್​ ಕಲ್ಯಾಣಶೆಟ್ಟಿ, ಮಿಲನ್​ ಕಲ್ಯಾಣಶೆಟ್ಟಿ, ಅಂಜಲಿ ಬಾಜಾರಮಠ, ಗಣೇಶ ಫುಲಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಚಿನ್​ ಕಲ್ಯಾಣಶೆಟ್ಟಿ ಭರವಸೆ
  • ಅಕ್ಕಲಕೋಟದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ
ಅಕ್ಕಲಕೋಟ: ಭಗವಂತ ಹಾಗೂ ಭಕ್ತರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿರುವ ಹೂಗಾರ ಸಮಾಜ ಶ್ರೇಷ್ಠವಾಗಿದ್ದು, ಸಮಾಜದ ಭವನ ನಿಮಾರ್ಣಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಶಾಸಕ ಸಚಿನ್​ ಕಲ್ಯಾಣಶೆಟ್ಟಿ ಭರವಸೆ ನೀಡಿದರು.
ನಗರದ ಮಲ್ಲಿಕಾರ್ಜುನ ಮಂಗಲ ಭವನದಲ್ಲಿ ತಾಲೂಕು ಹೂಗಾರ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಮಾಜ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಹಿಂದೂ ಧರ್ಮದಲ್ಲಿ ಹೂಗಾರ ಸಮಾಜಕ್ಕೆ ಮಹತ್ವದ ಸ್ಥಾನವಿದೆ. ಸಮಾಜ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮಾಡಿ, ದೇಶಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಮಾಜಿ ಸಂಸದ ಡಾ.ಜಯಸಿದ್ದೇಶ್ವರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಾಶಿನಾಥ ಗುರವ ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ಅಕ್ಕಲಕೋಟ ನಗರ ಅಧ್ಯಕ್ಷ ಮಿಲನ ಕಲ್ಯಾಣಶೆಟ್ಟಿ, ಮೈಂದರ್ಗಿ ನಗರಾಧ್ಯಕ್ಷೆ ಅಂಜಲಿ ಬಾಜಾರಮಠ. ಪ್ರಮುಖರಾದ ಮಹೇಶ ಹಿಂಡೋಲೆ, ಅನಿಲ ಮಂಗರುಳೆ, ಗಣೇಶ ಫುಲಾರಿ, ಮಲ್ಲಿಕಾರ್ಜುನ ಗುರವ, ಶಾಸ್ತ್ರಜ್ಞ ಭೀಮಾಶಂಕರ ಗುರವ, ಸಂಜಯ ಪಾಟೀಲ, ಶಿವಾನಂದ ಫುಲಾರಿ, ರಮೇಶ ಫುಲಾರಿ, ಮಲ್ಲಿನಾಥ ಪೂಜಾರಿ, ಬಸವರಾಜ ಫುಲಾರಿ, ಕಾಶಿನಾಥ ಫುಲಾರಿ, ಸ್ವಾಮೀನಾಥ ಗುರವ, ಉದಯ ಪಾಟೀಲ್​, ತುಕಾರಾಮ ವಿಂಚುರೆ, ಅಶೋಕ ಪಾಟೀಲ್​, ವಿಜಯ ಗುರವ ಇತರರಿದ್ದರು.
ವಿವಿಧ ಕ್ಷೇತ್ರದ 13 ಸಾಧಕರಿಗೆ ಸಮಾಜಭೂಷಣ ಪ್ರಶಸ್ತಿ ಹಾಗೂ 32 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮಹಾಲಕ್ಷಿ$್ಮ ಫುಲಾರಿ ಸ್ವಾಗತ ನೃತ್ಯಗೈದರು. ಶಿವಾನಂದ ಫುಲಾರಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾಧರ ಗುರವ ನಿರೂಪಣೆ ಮಾಡಿದರು. ಶರಣಪ್ಪ ಫುಲಾರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net