ಕೊಳ್ಳೇಗಾಲ ತಾಲೂಕು ಪತ್ರಕರ್ತರ ಭವನಕ್ಕೆ ಅನುದಾನ

ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಳ್ಳೇಗಾಲ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ-2026 ಸಮಾರಂಭಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ಆರ್.ನರೇಂದ್ರ, ಜೆ.ಮೋಹನ್, ಬಸವ ರಾಜು, ಕುಮಾರ್, ಸಿದ್ದಲಿಂಗಸ್ವಾಮಿ ಇತರರು ಇದ್ದಾರೆ.
ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಳ್ಳೇಗಾಲ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ-2026 ಸಮಾರಂಭಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ಆರ್.ನರೇಂದ್ರ, ಜೆ.ಮೋಹನ್, ಬಸವ ರಾಜು, ಕುಮಾರ್, ಸಿದ್ದಲಿಂಗಸ್ವಾಮಿ ಇತರರು ಇದ್ದಾರೆ.
Published on
ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕು ಪತ್ರಕರ್ತರ ಭವನ ಕಾಮಗಾರಿ ಅನುದಾನ ನೀಡುವ ಮೂಲಕ ಭವನ ಪೂರ್ಣಗೊಳಿಸುವುದಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಳ್ಳೇಗಾಲ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ-2026 ಸಮಾರಂಭದಲ್ಲಿ ಮಾತನಾಡಿದರು.
ಪಸ್ತುತ ಮಾಧ್ಯಮಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪತ್ರಿಕೆಗಳಿಗೆ ನಾಗರೀಕ ಸಮಾಜದಲ್ಲಿ ಗೌರವವಿದೆ. ನಾವೆಲ್ಲರೂ ಭಾರತೀಯರು ಎಂದು ಹೇಳಲಾದರೂ ಸಮಾಜದಲ್ಲಿ ಜಾತೀಯತೆ, ಅಸಮಾನತೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಇಂತಹ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಬೇಕು. ಸಂವಿಧಾನದಡಿ ಸ್ಥಾಪಿತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಕೊಳ್ಳಿಸಬೇಕು ಎಂದರು. ಕೊಳ್ಳೇಗಾಲ ಪತ್ರಿಕರ್ತರ ಭವನ ಪೂರ್ಣಕ್ಕೆ ಅಗತ್ಯವಿರುವ ಅನುದಾನ ನೀಡಲಾಗುತ್ತದೆ. ಪತ್ರಕರ್ತರ ಬೇಡಿಕೆಯಂತೆ ನಿವೇಶನ, ಲ್ಯಾಪ್‌ಟಾಪ್ ವಿತರಣೆಗೂ ಕ್ರಮವಹಿಸಲಾಗುತ್ತದೆ ಎಂದರು.
ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ಸಮಾಜದ ಕಿವಿಗಳಾಗಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಪತ್ರಿಕೆಗಳು ನಡೆಸುವುದು ಸುಲಭದ ವಿಚಾರವಲ್ಲ. ಹಲವು ಸವಾಲುಗಳ ನಡುವೆ ಪತ್ರಕರ್ತರು ಕಾಯಕದಲ್ಲಿ ತೊಡಗಿದ್ದಾರೆ.
ಗೌರವ ಸನ್ಮಾನ: ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಡಿ.ನಟರಾಜು, ನಿರ್ದೇಶಕರಾದ ಎಸ್.ರಾಜಶೇಖರ್, ಎಂ.ಮರಿಸ್ವಾಮಿ, ಮಲ್ಲಪ್ಪ ಯಡದೊರೆ, ಎಚ್.ಕೆ ವಿಜಯಾ ಮಹೇಶ ದತ್ತಿ ಪ್ರಶಸ್ತಿ ಪುರಸ್ಕೃತ ಸಿ.ಬಸಂತ್‌ಕುಮಾರ್, ಪತ್ರಿಕಾ ವಿತರಕ ರಾದ ಕುಶಾಲ್, ಗಿರೀಶ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಸಾಧನೈಗಿದ ತಾಲೂಕು ಸಂಘದ ಸದಸ್ಯ ಪಿ.ಮಹೇಶ ಅವರ ಪುತ್ರ ಎಂ.ವಂಶಿತ್ ಅವರನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಐ.ಇ.ಬಸವರಾಜು, ಡಿವೈಎಸ್ಪಿ ಜೆ.ಮೋಹನ್, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ರಾಜ್ಯ ಸಮಿತಿ ಸದಸ್ಯ ಸಿ.ಮಹೇಂದ್ರ, ಕೊಳ್ಳೇಗಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ, ಪ್ರಧಾನ ಕಾರ್ಯದರ್ಶಿ ಎನ್.ನಟರಾಜು, ಜಿಲ್ಲಾ ಸಂಘದ ಉಪಾಧ್ಯಕ್ಷ ಡಿ.ನಟರಾಜು, ಜಿಲ್ಲಾ ನಿರ್ದೇಶಕ ಎಸ್. ರಾಜಶೇಖರ್, ಎಂ.ಮರಿಸ್ಬಾಮಿ, ಮಲ್ಲಪ್ಪ ಯಡದೊರೆ ಹಾಗು ತಾಲೂಕು ಸಂಘದ ನಿರ್ದೇಶಕರು, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net