ನಾಯಿ ಕಡಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡ ತಾಲೂಕಿನ ಉಚ್ಚಂದುರ್ಗ ಗ್ರಾಮದ ಭೋವಿ ಮಂಜುನಾಥ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎರಡು ಕೈಗಳಿಗೆ ಗಂಬಿರ ಗಾಯ
ಕುರಿಗಾಯಿಗಳಿಂದ ರಕ್ಷಣೆ
ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಪಂಚಾಯಿತಿ ಸದಸ್ಯ ಭೊವಿ ಮಂಜುನಾಥ (46) ಅವರಿಗೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಎರಡು ಕೈಗಳಿಗೆ ಗಂಬಿರ ಗಾಯವಾಗಿದ್ದು, ಎಡಗೈ ಉಂಗುರ ಬೆಳೆ ತಂಡಾದ ಘಟನೆ ಇತ್ತೀಚೆಗೆ ನಡೆದಿದೆ.
ಗ್ರಾಪಂ ಸದಸ್ಯ ಮಂಜುನಾಥ ಅವರು ಶುದ್ದ ನೀರಿನ ಘಟಕ ಮಾಡಿಕೊಂಡಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿವ ನೀರು ಸರಬರಾಜು ಮಾಡುವ ವಾಹನ ತರಲು ಬೆಳಗಿನ ಜಾವ ತೋಟಕ್ಕೆ ತೆರಳಿದ್ದಾರೆ. ಈ ವೇಳೆ ಬೀದಿ ನಾಯಿಗಳು ಏಕಾ ಏಕಿ ಮಂಜುನಾಥನ ಮೇಲೆ ದಾಳಿ ನಡೆಸಿವೆ. ಎರಡು ಕೈಗಳಿಗೆ ಭಾರಿ ಗಾಯ ಪಡಿಸಿದವು. ಎಡಗೈ ಉಂಗರು ಬೆರಳನ್ನು ಕೂಡ ಕತ್ತರಿಸಿವೆ. ಈ ವೇಳೆ ಚೀರಾಡಿದ ಮಂಜುನಾಥನಿಗೆ ಪಕ್ಕದ ಕುರಿಗಾಯಿಗಳು ಬಂದು ರಕ್ಷಣೆ ಮಾಡಿದ್ದಾರೆ. ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.