ಮಕ್ಕಳ ಸಮಸ್ಯೆ ಪರಿಹರಿಸಲು ಗ್ರಾಮ ಸಭೆ ವೇದಿಕೆ Gram Sabha

ಮಕ್ಕಳ ಸಮಸ್ಯೆ ಪರಿಹರಿಸಲು ಗ್ರಾಮ ಸಭೆ ವೇದಿಕೆ Gram Sabha
ಮಕ್ಕಳ ಸಮಸ್ಯೆ ಪರಿಹರಿಸಲು ಗ್ರಾಮ ಸಭೆ ವೇದಿಕೆ Gram Sabha
Published on
ಶಿಡ್ಲಘಟ್ಟ: ಗ್ರಾಪಂ ಮಟ್ಟದಲ್ಲಿ ಮಕ್ಕಳ ಹಕ್ಕುಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲು, ಅವರ ಭಾಗವಹಿಸುವಿಕೆ ಮುಖ್ಯ. ಶಿಕ್ಷಣ, ಆರೋಗ್ಯ, ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ತಡೆಗಟ್ಟುವಿಕೆ ವಿಷಯಗಳ ಕುರಿತು ಸಲಹೆ ಸಂಗ್ರಹಿಸಿ ಗ್ರಾಪಂ ಮೂಲಕ ಪರಿಹಾರ ಕಂಡುಕೊಂಡು ಸಹಾಯ ಮಾಡಲು ಮತ್ತು ಮಕ್ಕಳ ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತರಿಸುವ ವೇದಿಕೆಯಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಹೇಳಿದರು.Gram Sabha
ತಾಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಓದುವ ಬೆಳಕು, ಪಂಚಾಯಿತಿಯಲ್ಲಿ ಶಿಕ್ಷಣ ಕಾರ್ಯಪಡೆ, ಮಹಿಳಾ ಕಾವಲು ಸಮಿತಿ, ಮಕ್ಕಳ ಗ್ರಾಮ ಸಭೆ, ಮಕ್ಕಳ ವಿಶೇಷ ಗ್ರಾಮ ಸಭೆ ಸೇರಿ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿನ ಅಭಿವೃದ್ಧಿಗೆ ಪಂಚಾಯತ್​ ರಾಜ್​ ಇಲಾಖೆಯಿಂದ ಸಹಕರಿಸುತ್ತಿದೆ. 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದ್ದು, ತಾಲೂಕಿನಲ್ಲಿ 33 ೋಕ್ಸೋ ಕೇಸ್​ಗಳು ದಾಖಲಾಗಿವೆ ಪ್ರತಿಯೊಂದು ಪ್ರಕರಣದ ಬಗ್ಗೆ ಎಫ್​ಐಆರ್​ ದಾಖಲಾಗಿರುವ ಬಗ್ಗೆ ಶ್ಲಾಸಿದರು. ಗ್ರಾಪಂ ಹಂತದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಮಹಿಳಾ ಕಾವಲು ಸಮಿತಿಯಿಂದ ಸಭೆ ನಡೆಸಿ, ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸುವಂತಾಗಬೇಕು ಎಂದರು.
ಗ್ರಾಮೀಣ ಮಕ್ಕಳು ಶಾಲೆಯ ಸ್ವಚ್ಛತೆ, ಉದ್ಯಾನವನ, ಊರಿನಲ್ಲಿರುವ ಸಮಸ್ಯೆಗಳ ಬಗ್ಗೆ ಇತರ ಬೇಡಿಕೆಗಳನ್ನು ಮುಂದಿಟ್ಟು ಚರ್ಚಿಸಿದರು.
ನಂತರ ತಾಲೂಕಿನ ಹಂಡಿಗನಾಳ ಗ್ರಾಪಂ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆ, ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಗ್ರಾಮಾಂತರ ಪೋಲಿಸ್​ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಪಂ ಇಒ ಹೇಮಾವತಿ, ಪೌರಾಯುಕ್ತೆ ಅಮೃತಾ, ಮಳಮಾಚನಹಳ್ಳಿ ಗ್ರಾಪಂ ಅಧ್ಯಕ್ಷೆ ಮಹಿಳಾ ಮತ್ತು ಮಕ್ಕಳ ಅಧಿಕಾರಿ ವೆಂಕಟೇಗೌಡ, ಮಳಮಾಚನಹಳ್ಳಿ ಪಿಡಿಒ ಶೈಲಾ, ಸಿಡಿಪಿಒ ವಿದ್ಯಾ ವಸ್ತದ್​, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್​, ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್​ಮೂರ್ತಿ, ಕಾರ್ಮಿಕ ಇಲಾಖೆ ವಿಜಯಲಕ್ಷ್ಮೀ, ನಗರದ ಗ್ರಾಮೀಣ ಪೊಲೀಸ್​ ಠಾಣೆಯ ನಾಗರಾಜ್​, ಮಕ್ಕಳ ರಕ್ಷಣಾ ಆಯೋಗದ ಮಂಜುನಾಥ್​, ಗ್ರಾಮೀಣಾಭಿವೃದ್ಧಿ ಎನ್​.ಜಿ.ಒ.ಉಷಾಶೆಟ್ಟಿ, ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ಚಂದ್ರಪ್ಪ, ಮುಖ್ಯಶಿಕ್ಷಕ ಮೋವಿನ್​, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net