ಚರಂಡಿ ಮುಚ್ಚದೆ ಗ್ರಾಪಂ ರ್ನಿಲಕ್ಷ್ಯ

Gram Panchayat's negligence in leaving the drain uncovered.
Gram Panchayat's negligence in leaving the drain uncovered.
Published on
ರಾಯಲ್ಪಾಡು/ಶ್ರೀನಿವಾಸಪುರ: ಗೌನಿಪಲ್ಲಿ ಪಂಚಾಯಿತಿ ಕೇಂದ್ರ ಸ್ಥಾನದ ಬಸ್​ ನಿಲ್ದಾಣ ಸಮೀಪ ಸ್ಥಳಿಯ ಗ್ರಾಮ ಪಂಚಾಯಿತಿಯವರು ಚರಂಡಿ ಅಗೆದು 15 ದಿನ ಕಳೆದರೂ ಮುಚ್ಚದ ಕಾರಣ ಜನಸಂಚಾರಕ್ಕೆ ಹಾಗೂ ವ್ಯಾಪಾರಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಗೌನಿಪಲ್ಲಿಯಲ್ಲಿ ಹೆಚ್ಚು ಜನಸಂದಣಿ ಇರುವ ಗ್ರಾಮವಾಗಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ಚರಂಡಿಗಳು ಮುಚ್ಚಿಹೋಗಿದ್ದು. ಇವುಗಳನ್ನು ಸರಿಪಡಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಈಶ್ವರಪ್ಪ ಅವರ ಸಿಬ್ಬಂದಿ ಬಸ್​ ನಿಲ್ದಾಣದ ಬಿಗ್​ಬಜಾರ್​ ಸಮೀಪ ಚರಂಡಿ ದುರಸ್ತಿ ಮಾಡಲು ಮಣ್ಣು ತೆಗೆದು ಹಳ್ಳ ಮಾಡಿ ಸುಮಾರು 15 ದಿನಗಳು ಕಳೆಯುತ್ತಿವೆ. ದುರಸ್ತಿ ಮಾಡಲು ಯಾರೊಬ್ಬರೂ ಇತ್ತ ಮುಖ ಮಾಡಿಲ್ಲ ಎಂದು ಸ್ಥಳದಲ್ಲಿ ಅಸಮಾಧಾನ ಹೊರ ಹಾಕಿದರು.
ನಿತ್ಯ ಸಂಚಾರ ಮಾಡುವ ವಾಹನಗಳಿಗೆ, ವ್ಯಾಪಾರಿಗಳಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ರಸ್ತೆ ದಾಟಲು ತೀವ್ರ ಸಮಸ್ಯೆ ಎದುರಾಗಿದೆ. ಸಂಬಂಧಪಟ್ಟ ಪಂಚಾಯಿತಿಗೆ 2&-3 ತಿಂಗಳಿಂದ ಪಿಡಿಒ ಇಲ್ಲ. ಪಂಚಾಯಿತಿಯ ಎಲ್ಲ ನಿರ್ವಹಣೆ ಉಸ್ತುವಾರಿ ಕಾರ್ಯದರ್ಶಿ ಈಶ್ವರಪ್ಪ ಅವರದೇ ಆಗಿದೆ. ಕರೆ ಮಾಡಿದರೆ ೋನ್​ ರಿಸಿವ್​ ಮಾಡಲ್ಲ. ನಮ್ಮ ಗೋಳು ಕೇಳುವರಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ನರೇಂದ್ರಬಾಬು ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಗೌನಿಪಲ್ಲಿಗೆ ಕಾಯಂ ಪಿಡಿಒ ಇಲ್ಲ. ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಚರಂಡಿ ಸಮಸ್ಯೆ ಬಗೆಹರಿಸಲು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚನೆ ನೀಡಲಾಗುವುದು.

— ಡಾ.ಸರ್ವೇಶ್​ ಇಒ
ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಚರಂಡಿ ದುರಸ್ತಿ ಕಾಮಗಾರಿ ಸರಿಪಡಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ. ವೆಂಕಟರವಣಪ್ಪ, ಲಕ್ಷಿ$್ಮದೇವಮ್ಮ, ಚನ್ನಪ್ಪ, ವೆಂಕಟೇಶ್​, ಈಶ್ವರಪ್ಪ, ವೆಂಕಟಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net