ಎಲ್ಲ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ ಬೀಗ ಜಡಿದ ನಂತರ ಕೋಳಿ ಅಂಗಡಿಗಳ ಮಾಲೀಕರೊಂದಿಗೆ ಗ್ರಾಪಂನಲ್ಲಿ ಸಭೆ ನಡೆಸಿದ್ದು, ಗ್ರಾಪಂನಿಂದ ಆಟೋ ವ್ಯವಸ್ಥೆ ಮಾಡುತ್ತೇವೆ. ನಿತ್ಯ ಬೆಳಗ್ಗೆ ನಿಮ್ಮ ಅಂಗಡಿ ಮುಂದೆಗೆ ಆಟೋ ಬರುತ್ತದೆ. ಕೋಳಿ ತ್ಯಾಜ್ಯವನ್ನು ಆಟೋಗೆ ಹಾಕಿ ಎಂದು ಹೇಳಿ, ಕೋಳಿ ಅಂಗಡಿಗಳ ಮಾಲೀಕರಿಗೆ ಪ್ರತಿ ತಿಂಗಳು ತ್ಯಾಜ್ಯ ತೆಗೆದುಕೊಂಡು ಹೋಗಲು ಸಾವಿರ ರೂಪಾಯಿ ದಂಡ ವಿಧಿಸಿದರು.