ಹೆಗಡೆ ಜನ್ಮಶತಮಾನೋತ್ಸವ ಸರ್ಕಾರವೇ ಆಯೋಜಿಸಲಿ; ಪಿ.ಜಿ.ಆರ್.ಸಿಂಧ್ಯ ಸಲಹೆ

ಮಾಜಿ ಪ್ರದಾನಿ ಚಂದ್ರಶೇಖರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ಲೀಲಾದೇವಿ ಆರ್.ಪ್ರಸಾದ್, ಮಾಜಿ ಸ್ಪೀಕರ್ ರಮೇಶ ಕುಮಾರ್ ಮತ್ತಿತರರಿದ್ದರು.
ಮಾಜಿ ಪ್ರದಾನಿ ಚಂದ್ರಶೇಖರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ಲೀಲಾದೇವಿ ಆರ್.ಪ್ರಸಾದ್, ಮಾಜಿ ಸ್ಪೀಕರ್ ರಮೇಶ ಕುಮಾರ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಮಕೃಷ್ಣ ಹೆಗಡೆ ಜನ್ಮಶತಮಾನೋತ್ಸವ ಸರ್ಕಾರವೇ ಆಯೋಜಿಸಲಿ
  • ಜನತಾ ಪರಿವಾರದ ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ ಸಲಹೆ
  • ಮಾಜಿ ಪ್ರದಾನಿ ಚಂದ್ರಶೇಖರ್ ಜನ್ಮ ಶತಮಾನೋತ್ಸವ

ಬೆಂಗಳೂರು :ಕರ್ನಾಟಕದ ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಜನ್ಮ ಶತಮಾನೋತ್ಸವವನ್ನು ರಾಜ್ಯಸರ್ಕಾರವೇ ಆಚರಿಸಬೇಕು ಎಂದುಮಾಜಿ ಸಚಿವ ಹಾಗೂ ಜನತಾ ಪರಿವಾರದಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾಸಲಹೆ ನೀಡಿದ್ದಾರೆ.

ಭಾರತ ಯಾತ್ರಾಕೇಂದ್ರವು ಚಿತ್ರಕಲಾ ಪರಿಷತ್ತಿನಲ್ಲಿಶುಕ್ರವಾರ ಆಯೋಜಿಸಿದ್ದ ಮಾಜಿಪ್ರಧಾನಿ ಚಂದ್ರಶೇಖರ್ ಜನ್ಮಶತಮಾನೋತ್ಸವಸಮಾರಂಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿರುವಬಹುತೇಕ ಸಚಿವರು ಜನತಾ ಪರಿವಾರದಹಿನ್ನೆಲೆಯಿಂದ ಬಂದವರು.ಅವರೆಲ್ಲರಿಗೂಚಂದ್ರಶೇಖರ್ ಹಾಗೂ ರಾಮಕೃಷ್ಣಹೆಗಡೆಯವರೊಂದಿಗೆ ಉತ್ತಮಒಡನಾಟವಿತ್ತು.ಈ ಕಾರಣಕ್ಕಾಗಿರಾಮಕೃಷ್ಣ ಹೆಗಡೆಯವರ ಜನ್ಮಶತಮಾನೋತ್ಸವವನ್ನು ರಾಜ್ಯಸರ್ಕಾರವೇ ಆಚರಿಸಬೇಕು.

ಕರ್ನಾಟಕದಲ್ಲಿರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಆಗಿದ್ದರ ಹಿಂದೆ ಚಂದ್ರಶೇಖರ ಅವರಪ್ರಭಾವವಿತ್ತು.ಮೊರಾರ್ಜಿ ದೇಸಾಯಿಅಧಿಕಾರದಿಂದ ಕೆಳಗಿಳಿದಾಗಚಂದ್ರಶೇಖರ್ ಮನಸ್ಸು ಮಾಡಿದ್ದರೆಪ್ರಧಾನಮಂತ್ರಿ ಆಗಬಹುದಿತ್ತು.ಆದರೆ ಅಧಿಕಾರಕ್ಕೆಆಸೆ ಪಟ್ಟವರಲ್ಲ ಎಂದು ಸಿಂಧ್ಯಾವಿವರಿಸಿದರು.

ಕಾರ್ಯಕ್ರಮದಲ್ಲಿಮಾಜಿ ಸ್ಪೀಕರ್ ರಮೇಶ ಕುಮಾರ್,ಚಿತ್ರಕಲಾ ಪರಿಷತ್ಅಧ್ಯಕ್ಷ ಬಿ.ಎಲ್.ಶಂಕರ್,ಮಾಜಿ ಸಚಿವೆಲೀಲಾದೇವಿ ಆರ್.ಪ್ರಸಾದ್,ಮಾಜಿ ಸಭಾಪತಿವಿ.ಆರ್.ಸುದರ್ಶನ್,ಮಾಜಿ ಎಂಎಲ್‌ಸಿಎಂ.ಪಿ.ನಾಡಗೌಡ,ಭಾರತ್ ಯಾತ್ರಾಕೇಂದ್ರದ ಪ್ರಧಾನ ಕಾರ್ಯದರ್ಶಿಕೆ.ವಿ.ನಾಗರಾಜಮೂರ್ತಿ,ಸಂಚಾಲಕಕೆ.ಎಸ್.ನಾಗರಾಜ್ಮತ್ತಿತರರು ಉಪಸ್ಥಿತರಿದ್ದರು.

ಪ್ರಾಮಾಣಿಕತೆಗೆ ಹೆಸರಾಗಿದ್ದ ಚಂದ್ರಶೇಖರ್ ಅವರು ಆಸ್ತಿ ಪಾಸ್ತಿ ಮಾಡಿಕೊಂಡಿದ್ದರೆ ರಾಜಕಾರಣದಲ್ಲಿ ಎಲ್ಲೋ ಇರುತ್ತಿದ್ದರು. ಅದನ್ನು ಎಂದಿಗೂ ಮಾಡಲಿಲ್ಲ. ಈ ಕಾರಣದಿಂದಲೇ ಅವರು ಜನರ ಕಣ್ಣಲ್ಲಿ ಆದರ್ಶವಾಗಿ ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net