ಯಾದಗಿರಿ: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರಂತರ ವೈಜ್ನಾನಿಕವಾಗಿ ಮೌಲ್ಯಮಾಪನ ನಡೆಸಿ ಜಿಲ್ಲೆಯ ಎಲ್ಲಾ ೬ ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸುವ ಮೂಲಕ ಸರ್ಕಾರ ನಿರೀಕ್ಷೆಯಂತೆ ರೈತರ ಸಂಕಷ್ಟಕ್ಕೆ ಸ್ಪಂಽಸಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು,ಮೊದಲ ಹಂತದಲ್ಲಿ ೧೦೨ ತಾಲೂಕಗಳನ್ನು, ಎರಡನೇ ಹಂತದಲ್ಲಿ ೨೩ ತಾಲೂಕಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು.ಸೆ.೧೬ ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವರಾದ ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ನೈಸರ್ಗಿಕ ವಿಕೋಪಗಳ ಸಂಪುಟ ಉಪಸಮಿತಿ ಸಭೆಯಲ್ಲಿ ಸಚಿವರು ನೀಡಿದ ನಿರ್ದೇಶನದಂತೆ ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ನಾನಿಕ ಮಾನದಂಡಗಳ ಆಧರಿಸಿ ರಾಜ್ಯದ ೧೭ ಜಿಲ್ಲೆಗಳ ೫೩ ತಾಲ್ಲೂಕಗಳನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರಲ್ಲಿ ಯಾದಗಿರಿ,ಗುರುಮಠಕಲï,ವಡಗೇರಾ,ಹುಣಸಗಿ ಮತ್ತು ಸುರಪುರ ತಾಲ್ಲೂಕಗಳನ್ನು ಸೇರ್ಪಡೆ ಮಾಡುವ ಮೂಲಕ ಈ ಭಾಗದ ರೈತರ ಬೆಂಬಲಕ್ಕೆ ಸರ್ಕಾರ ನಿಂತಿದೆ. ನಮ್ಮ ಜಿಲ್ಲೆಯ ಹೋರಾಟಗಾರರು,ಜನಪ್ರತಿನಿಧಿಗಳು ಹಾಗೂ ರೈತರಿಗೆ ನೀಡಿದ್ದ ಭರವಸೆಯನ್ನು ಸರ್ಕಾರ ಉಳಿಸಿಕೊಂಡಿದೆ. ಈ ವಿಷಯದಲ್ಲಿ ತಾವು ಎರಡು ಬಾರಿ ಮುಖ್ಯಮಂತ್ರಿ ಸೇರಿದಂತೆ ಕಂದಾಯ ಸಚಿವ ಜಿ.ಪರಮೇಶ್ವರ ಅವರನ್ನು ಭೇಟ ಮಾಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ.ಅವರು ಸಕಾರಾತ್ಮಕವಾಗಿ ಸ್ಪಂಽಸಿದ್ದರು.ಸಮಸ್ತ ಜಿಲ್ಲೆಯ ರೈತರ ಪರವಾಗಿ ಸಿಎಂ ಮತ್ತು ಕಂದಾಯ ಸಚಿವ ಜಿ.ಪರಮೇಶ್ವರ ಅವರನ್ನು ಅಭಿನಂದಿಸುವುದಾಗಿ ಶಾಸಕ ತುನ್ನೂರ ಅವರು ತಿಳಿಸಿದ್ದಾರೆ. ಮುಂದಿನ ಭಾಗವಾಗಿ ಅಽಕಾರಿಗಳ ತಂಡ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ನೇರವಾಗಿ ಪರಿಶೀಲಿಸಲಿದ್ದು ಅಂತಿಮ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಹಾಗೂ ಸಂಬಧಿಸಿದ ಅಧಿಕಾರಿಗಳಿಗೆ ಕಂದಾಯ ಸಚಿವರು ಸೂಚಿಸಿದ್ದಾರೆಂದು ತಿಳಿಸಿದ್ದಾರೆ.