51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ಆದೇಶ

51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ಆದೇಶ
51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ಆದೇಶ
Published on

ಪ್ರಮುಖ ಮುಖ್ಯಾಂಶಗಳು

  • 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ಆದೇಶ
  • ಖಾಯಂ ಶಿಕ್ಷಕರ ನೇಮಕಾತಿಗೆ ಪರ್ಯಾಯವಾಗಿ ಕ್ರಮ
  • ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇಲಾಖೆಯ ನಿರ್ಧಾರ

ಬೆಂಗಳೂರು: ಸರ್ಕಾರಿಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿಖಾಲಿಯಿರುವ ಶಿಕ್ಷಕರುಗಳಹುದ್ದೆಗಳಿಗೆದುರಾಗಿ ಶೈಕ್ಷಣಿಕಹಿತದೃಷ್ಟಿಯಿಂದ ಅತಿಥಿಶಿಕ್ಷಕರುಗಳನ್ನು ತಾತ್ಕಾಲಿಕವಾಗಿನೇರ ನೇಮಕಾತಿ ಮೂಲಕ ಶಿಕ್ಷಕರನ್ನುಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕವರ್ಷದ ಅಂತ್ಯದವರೆಗೆ ಎಂಬಷರತ್ತಿಗೊಳಪಟ್ಟು ಸರ್ಕಾರಿಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿಒಟ್ಟು 51 ಸಾವಿರಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿನೇಮಕ ಮಾಡಿಕೊಳ್ಳಲು ಸರ್ಕಾರವುಮಂಜೂರಾತಿ ನೀಡಿ ಆದೇಶಿಸಿದೆ.

ಪ್ರಾಥಮಿಕಶಾಲೆಗಳಿಗೆ 40ಸಾವಿರ ಹಾಗೂಪ್ರೌಢಶಾಲೆಗೆ 11ಸಾವಿರ ಶಿಕ್ಷಕರುಹೀಗೆ ಒಟ್ಟು 51ಸಾವಿರ ಅತಿಥಿಶಿಕ್ಷಕರ ನೇಮಕಾತಿಗೆ ಸರ್ಕಾರಆದೇಶಿಸಿದೆ.2026-27 ನೇ ಶೈಕ್ಷಣಿಕಸಾಲಿಗೆ ನೇಮಕಾತಿ ಮಾಡಿಕೊಳ್ಳಲಾಗುವಒಟ್ಟು 51 ಸಾವಿರಅತಿಥಿ ಶಿಕ್ಷಕರ ಗೌರವಧನ ಪಾವತಿಗಾಗಿಅವಶ್ಯವಿರುವ ಅನುದಾನದ ವಿವರಹಾಗೂ ಅತಿಥಿ ಶಿಕ್ಷಕರು ಜಿಲ್ಲಾಹಾಗೂ ತಾಲ್ಲೂಕುವಾರು ವಿವರಗಳೊಂದಿಗೆಪ್ರಸ್ತಾವನೆಯನ್ನು ಸರ್ಕಾರಕ್ಕೆಸಲ್ಲಿಸುವಂತೆ ಇದೇ ವೇಳೆ ಶಿಕ್ಷಣಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ.

ಶಾಲಾಶಿಕ್ಷಣ ಇಲಾಖೆ ಆಯುಕ್ತರು,2026-27ನೇ ಶೈಕ್ಷಣಿಕವರ್ಷದ ಏಕರೂಪದ ಮಾರ್ಗಸೂಚಿಯನ್ನುನಿಗದಿಪಡಿಸಿ 2026,ಮೇ ತಿಂಗಳಿನಲ್ಲಿಯೇಶಾಲೆಗಳು ಪ್ರಾರಂಭವಾಗಲಿದ್ದು,ವಿದ್ಯಾರ್ಥಿಗಳಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂಶಿಕ್ಷಕರ ನೇಮಕವಾಗುವವರೆಗೆ ಅಥವಾಶೈಕ್ಷಣಿಕ ವರ್ಷದ ಅಂತ್ಯದವರೆಗೆಯಾವುದು ಮೊದಲೊ ಅಲ್ಲಿಯವರೆಗೆಶಿಕ್ಷಕರ ಕೊರತೆಯನ್ನು ನೀಗಿಸುವದೃಷ್ಟಿಯಿಂದ ತಾತ್ಕಾಲಿಕವಾಗಿಅತಿಥಿ ಶಿಕ್ಷಕರನ್ನು ನೇಮಕಾತಿಮಾಡಿಕೊಳ್ಳುವ ಅನಿವಾರ್ಯತೆಕುರಿತು ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನುಆಧರಿಸಿ ಸರ್ಕಾರ ಈ ಮೇಲಿನ ಆದೇಶವನ್ನುಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net