ಜಿಲ್ಲಾ ಆಸ್ಪತ್ರೆ ಹಸ್ತಾಂತರಕ್ಕೆ ಸರ್ಕಾರ ಆದೇಶ..!

ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೧ ಮತ್ತು ೧೩ ರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿ ಆರಂಭಗೊAಡಿರುವುದು.
ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೧ ಮತ್ತು ೧೩ ರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿ ಆರಂಭಗೊAಡಿರುವುದು.
Published on
ಸಂತೋಷ ದೇಶಪಾಂಡೆ
ಬಾಗಲಕೋಟೆ: ಬಹುದಿನಗಳ ಕನಸಾಗಿರುವ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಿನದಿಂದ ದಿನಕ್ಕೆ ವೇಗ ದೊರೆತಿದ್ದು, ಕಾಮಗಾರಿ, ಅಗತ್ಯ ಸೌಲಭ್ಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಇದೀಗ ಸರ್ಕಾರವು ಜಿಲ್ಲಾ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸುವ ಮೂಲಕ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ..!!
ಈಚೆಗೆ ನಡೆದ ಬಾಗಲಕೋಟೆ ಉಪ ಚುನಾವಣೆ ಸಮರದಲ್ಲಿ ಆಡಳಿತ ಪಕ್ಷಕ್ಕೆ ಇದು ದೊಡ್ಡ ಅಸ್ತçವಾಗಿ ಪರಿಗಣಿಸಿತ್ತು, ವಿಪಕ್ಷಗಳು ಟೀಕೆ, ಟಿಪ್ಪಣಿ ಮಾಡಿ ಮೆಡಿಕಲ್ ಕಾಲೇಜು ಬೊಟಾಟಿಕೆ. ಯಾವುದೇ ಕಾರಣಕ್ಕೂ ಮಾಡುವದಿಲ್ಲ. ಭೂಮಿ ಪೂಜೆ ಮಾಡಿ ಕೈ ಬಿಡುತ್ತಾರೆ ಎನ್ನುವ ಮಾತುಗಳನ್ನು ಹರಡಿತ್ತು. ಫಲಿತಾಂಶ ಪ್ರಕಟಗೊಂಡು ಒಂದು ವಾರದಲ್ಲಿ ಕಾಮಗಾರಿ ಕೂಡಾ ಭರ್ಜರಿಯಾಗಿ ಆರಂಭವಾಗಿದ್ದು, ೪೦೦ ಹಾಸಿಗೆ ಜಿಲ್ಲಾ ಆಸ್ಪತ್ರೆಯು ಸರ್ಕಾರಿ ಮೆಡಿಕಲ್ ಕಾಲೇಜಿನ ಸಂಶೋಧನಾ ಚಟುವಟಿಕೆ, ಸೇವೆಗೆ ಬಳಸಿಕೊಳ್ಳಲು ಸರ್ಕಾರ ಆದೇಶಿಸಿದೆ. ತನ್ಮೂಲಕ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಆರಂಭವಾಗುವ ಲಕ್ಷಣಗಳು ಗೋಚರಿಸಿದೆ.
ಮಹತ್ವದ ಆದೇಶದಲ್ಲಿ ಏನಿದೆ..?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯನ್ನು ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ೧೫೦ ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಭಿಸಲು ಅಗತ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ ಬಾಲಕ, ಬಾಲಕಿಯರ ಹಾಸ್ಟೆಲ್‌ಗಳು, ಬೋಧಕ ಸಿಬ್ಬಂದಿಗಳ ವಸತಿ ಗೃಹಗಳು, ಇತರೆ ಪೂರಕವಾದ ಕಾಮಗಾರಿಗಳಿಗೆ ಅವಶ್ಯವಿರುವ ೪೫೦ ಕೋಟಿ ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಸರ್ಕಾರಿ ಮೆಡಿಕಲ್ ಕಾಲೇಜಿನ ವಿಶೇಷಾಽಕಾರಿಗಳ ಕೋರಿಕೆ ಮೇರೆಗೆ ೨೦೨೫ ನೇ ಸಾಲಿನ ಆರ್‌ಜಿಯುಎಚ್‌ಎಸ್, ಎನ್‌ಎಂಸಿ ಗಳಿಗೆ ೨೦೨೬-೨೭ ನೇ ಸಾಲಿಗೆ ವೈದ್ಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಹೀಗಾಗಿ ಪರಿವೀಕ್ಷಣೆ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಿಬ್ಬಂದಿಗಳ ಆಡಳಿತ ನಿಯಂತ್ರಣ ಸೇರಿದಂತೆ, ಸಂಪೂರ್ಣ ಆಸ್ಪತ್ರೆ, ಇನ್ನಿತರ ಕಟ್ಟಡಗಳನ್ನು ಪೂರ್ಣ ಪ್ರಮಾಣದಲ್ಲಿ ಹಸ್ತಾಂತರ ಮಾಡಲು ತಿಳಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿರುವ ಎಲ್ಲ ಹುದ್ದೆಗಳೊಂದಿಗೆ ವೈದ್ಯಕೀಯ ಕಾಲೇಜಿನ ನಿಯಂತ್ರಣಕ್ಕೆ ಹಸ್ತಾಂತರಿಸಲಾಗಿದೆ. ಎನ್‌ಎಂಸಿ ಮಾನದಂಡಗಳ ಪ್ರಕಾರ ಪ್ರಕ್ರಿಯೆ ನಡೆದಿದೆ.
ನವನಗರದ ಸೆಕ್ಟರ್ ನಂಬರ್ ೧ ಮತ್ತು ೧೩ ರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಳ್ಳಲಿದೆ. ೪೫೦ ಕೋಟಿ ರೂ. ಮೊತ್ತದ ಯೋಜನೆ ಹಾಕಿಕೊಳ್ಳಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ೩೧೯ ಕೋಟಿ ರೂ. ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ೧೫೧ ಬೋಧಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಒಟ್ಟಾರೆ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ದಿಟ್ಟ ಹೆಜ್ಜೆ ಸರ್ಕಾರ ಹಂತ ಹಂತವಾಗಿ ಇಡುತ್ತಿದ್ದು, ಎರಡು ವರ್ಷದಲ್ಲಿ ಅಂತಿಮ ಹಂತಕ್ಕೆ ತಲುಪುವ ಸಾಧ್ಯತೆ ಇದೆ. ಆದರೇ ಆರಂಭಿಕ ವೇಗವು ಕೊನೆ ವರೆಗೂ ಕಾಯ್ದುಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯ.
=======
ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಭೂಮಿ ಪೂಜೆ ಬಳಿಕ ಆಡಳಿತಾತ್ಮಕ ಹಲವು ಬೆಳವಣಿಗೆಗೆ ನಡೆಯುತ್ತೀವೆ. ಇವೆಲ್ಲ ಸಹಜ ಪ್ರಕ್ರಿಯೆಗಳು. ಎನ್‌ಎಂಸಿ ಮಾನದಂಡಗಳ ಪ್ರಕಾರ ಜಿಲ್ಲಾ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿ ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಹಂತ ಹಂತವಾಗಿ ಪ್ರಕ್ರಿಯೆ ಪೂರ್ಣಗೊಂಡಾಗ ಮಾತ್ರ ಎಲ್ಲವು ಸಾಧ್ಯ. ಸೆಕ್ಟರ್ ೧ ಮತ್ತು ೧೩ ರಲ್ಲಿ ಕಾಮಗಾರಿ ಆರಂಭಗೊ0ಡಿದೆ ಎಂದು ಸರ್ಕಾರಿ ಮೆಡಿಕಲ್ ಕಾಲೇಜು ವಿಶೇಷಾಽಕಾರಿ ಬಿ.ಎಚ್.ನಾರಾಯಣಿ ವಿಜಯವಾಣಿಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net