ಬೈಲಹೊಂಗಲ: ಸರ್ಕಾರ ಮಾರ್ಚ್ 27ರ ಒಳಗೆೆ ಚನ್ನಮ್ಮ ಸಮಾಧಿ ಸ್ಥಳದ ಬಗ್ಗೆ ಸ್ಪಷ್ಟ ನಿರ್ಧಾರ ಕೆಗೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಗರದ ರಾಯಣ್ಣ ವತ್ತದಲ್ಲಿ ಹಮ್ಮಿಕೊಂಡಿದ್ದ 16ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿ, ಸರ್ಕಾರ ಚನ್ನಮ್ಮಾಜಿ ವಿಷಯದಲ್ಲಿ ರ್ನಿಲಕ್ಷ$್ಯ ತೋರುತ್ತಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಮಹಿಳೆಯನ್ನು ಅವಮಾನಿಸುತ್ತಿದೆ ಎಂದರು. ರೆತ ಮುಖಂಡರಾದ ಅಪ್ಪಾಸಾಹೇಬ ಲಕ್ಕುಂಡಿ, ಮಲ್ಲಿಕಾರ್ಜುನ ಹುಂಬಿ ಮಡಿವಾಳಪ್ಪ ಹೋಟಿ ಮಾತನಾಡಿದರು. ಶಿವಾನಂದ ಕೋಲಕಾರ, ಡಿ.ವೈ.ಗರಗದ, ಮಡಿವಾಳಪ್ಪ ಚಿಕ್ಕೊಪ್ಪ, ಮಹೇಶ ಹರಕುಣಿ, ರಫೀಕ್ ಬಡೇರ, ಬಸವರಾಜ ನೇಸರಗಿ, ರಿತೇಶ ಪಾಟೀಲ, ವಿಜಯ ಪತ್ತಾರ, ರಾಜು ಬೋಳನ್ನವರ, ಮಾರುತಿ ಕೊಂಡೊರ, ಅಶೋಕ ಬೋರಕನ್ನವರ, ಮಹಾಂತೇಶ ಗುಂಡ್ಲೂರ, ಅಶೋಕ ಮತ್ತಿಕೊಪ್ಪ, ಶಿವಾನಂದ ತುರಮರಿ, ಚಂದ್ರಶೇಖರ ಭರಮಣ್ಣವರ ಇತರರಿದ್ದರು.