ಇಸ್ಕಾನ್ ದೇವಾಲಯದಲ್ಲಿ ಗೋವರ್ಧನ ಪೂಜೆ, ದೀಪೋತ್ಸವ

ದೀಪಾವಳಿ ಪ್ರಯುಕ್ತ ವಿಶೇಷ ಕಾರ್ಯಕ್ರಮ
During the Govardhana Puja and Deepotsava held at the ISKCON temple, an 'Annakuta' offering was presented to the Lord.
ಇಸ್ಕಾನ್ ದೇವಾಲಯದಲ್ಲಿ ನಡೆದ ಗೋವರ್ಧನ ಪೂಜೆ ಮತ್ತು ದೀಪೋತ್ಸವದಲ್ಲಿ ದೇವರಿಗೆ ಅನ್ನಕೂಟ ನೇವೇದ್ಯ ಸಮರ್ಪಿಸಲಾಯಿತು.
Published on: 

ಬೆಂಗಳೂರು : ಇಸ್ಕಾನ್ ದೇವಾಲಯದಲ್ಲಿ ದೀಪಾವಳಿ ಪ್ರಯುಕ್ತ ಶ್ರೀಗೋವರ್ಧನ ಪೂಜೆ ಮತ್ತು ದೀಪೋತ್ಸವವನ್ನು ಭಕ್ತಿಭಾವ ಹಾಗೂ ವೈಭವದಿಂದ ಆಚರಿಸಲಾಯಿತು. ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿ ಗೋಕುಲವಾಸಿಗಳನ್ನು ರಕ್ಷಿಸಿದ ಲೀಲೆಯ ಸ್ಮರಣೆಯಲ್ಲಿ ನಡೆದ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಭಕ್ತರು ಗೋವರ್ಧನಾಷ್ಟಕ ಗಾಯನದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು. ಈ ವೇಳೆ ಗೋಶಾಲೆಯಲ್ಲಿ ಗೋಪಾಲ ಚಿತ್ರಕ್ಕೆ ಆರತಿ ಹಾಗೂ ಗೋಪೂಜೆ ನೆರವೇರಿತು. ಕೃಷ್ಣ ಬಲರಾಮರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ದೇವರಿಗೆ ಭಕ್ತರು ಅನ್ನಕೂಟ ನೈವೇದ್ಯವನ್ನು ಸಮರ್ಪಿಸಿದರು

ದೇವಾಲಯದಲ್ಲಿ ದಾಮೋದರ ಆರತಿ ಸಲ್ಲಿಸಲಾಯಿತು. ಆರತಿಯ ನಂತರ ಭಗವಂತನನ್ನು ಪಲ್ಲಕ್ಕಿಯಲ್ಲಿ ಮುಖ್ಯ ದೇವಾಲಯಕ್ಕೆ ಕರೆದೊಯ್ಯಲಾಯಿತು. ಶಯನ ಪಲ್ಲಕ್ಕಿ ಸೇವೆ ನಂತರ ಎಲ್ಲಾ ಭಕ್ತರಿಗೆ ಅನ್ನಕೂಟ ಪ್ರಸಾದ ವಿತರಿಸಲಾಯಿತು.

A scene from the Govardhana Puja held at the ISKCON temple on the occasion of Deepavali.
ಇಸ್ಕಾನ್ ದೇವಾಲಯದಲ್ಲಿ ದೀಪಾವಳಿ ಪ್ರಯಕ್ತ ನಡೆದ ಗೋವರ್ಧನ ಪೂಜೆಯ ದೃಶ್ಯ

ಈ ವೇಳೆ ಮಾತನಾಡಿದ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ, ಎಲ್ಲರ ಜೀವನದಲ್ಲಿ ಬೆಳಕನ್ನು ತರುವಂತಹ ಉತ್ಸವ ದೀಪಾವಳಿ ಹಬ್ಬ, ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಜ್ಯೋತಿಯನ್ನು ಹರಡಿಸುವ ಹಬ್ಬ ದೀಪಾವಳಿ. ಭಗವಂತ ತಮ್ಮ ಭಕ್ತರನ್ನು ಸದಾಕಾಲ ರಕ್ಷಿಸುತ್ತಾನೆ ಅನ್ನೋದಕ್ಕೆ ಸಾಕ್ಷಿ ಗೋವರ್ಧನ ಲೀಲೆ. ಹಾಗಾಗಿ ಎಲ್ಲರೂ ದಿನನಿತ್ಯ ಶ್ರೀಕೃಷ್ಣನ ನಾಮಸಂಕೀರ್ತನೆ, ಭಗವತ್ ಪಾರಾಯಣ ಮಾಡಿದರೆ ಕಷ್ಟಕರ ಸಂದರ್ಭದಲ್ಲಿ ಪರಮಾತ್ಮ ಕಾಪಾಡುತ್ತಾನೆ. ಎಲ್ಲರ ಜೀವನದಲ್ಲಿ ಬೆಳಕು ಬೆಳಗಲಿ ಎಂದು ಶುಭ ಹಾರೈಸಿದರು.